
MADHUGIRI : ಮಧುಗಿರಿ ಕ್ಷೇತ್ರವು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲಿದ್ದು, ಭೂಮಿಗೆ ಬಂಗಾರದ ಬೆಲೆಯಿದೆ. ಯಾವ ರೈತರು ಕೂಡ ನಿಮ್ಮ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಶಾಸಕ ಕೆ.ಎನ್. ರಾಜಣ್ಣ ರೈತರಿಗೆ ಸಲಹೆ ನೀಡಿದರು
ತಾಲೂಕಿನ ಐಡಿಹಳ್ಳಿ ಹೋಬಳಿ ಮಟ್ಟದ ಜನಸ್ಪಂದನ, ಖಾತೆ ಅಂದೋಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ತಮ್ಮ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಿ. ಅದಕ್ಕಾಗಿ ಖಾತೆ ಅಂದೋಲನ ಹಾಗೂ ನವತಿ ಖಾತೆಗೂ ಆದ್ಯತೆ ನೀಡಲಾಗಿದ್ದು ಸುರಕ್ಷತೆ ದೃಷ್ಟಿಯಿಂದ ಈಗ ಡಿಜಿಟಲೀಕರಣ ಮಾಡುತ್ತಿದ್ದು, ನಿಮ್ಮ ಭೂ ದಾಖಲೆಗಳನ್ನು ತಿದ್ದಲು ಸಾಧ್ಯವಿಲ್ಲ. ದಾಖಲೆ ಸರಿಪಡಿಸಿಕೊಂಡು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಿ ಯಾರೂ ಜಮೀನು ಮಾರಬೇಡಿ. ಹಣಕಾಸಿನ ನೆರವು ಬೇಕಾದಲ್ಲಿ ಡಿಸಿಸಿ ಬ್ಯಾಂಕಿನಿಂದಲೇ ಒದಗಿಸಲಾಗುವುದು ಈ ಹೋಬಳಿಯಲ್ಲೇ ಈಗಾಗಲೇ 175 ಕೋಟಿ ಸಾಲ ಮನ್ನವಾಗಿದ್ದು ಐಡಿಹಳ್ಳಿ ಬ್ಯಾಂಕಿನಲ್ಲಿ 45 ಕೋಟಿ ಸಾಲ ವಿತರಣೆಯಾಗಿದೆ ಕೆಲವರಿಗೆ ಸಾಗುವಳಿ ಚೀಟಿಯಿದ್ದು ಹೆಚ್ಚಿನ ದಾಖಲೆಗಳಿಲ್ಲ ಅರ್ಜಿ ನೀಡಿದರೆ ಸೂಕ್ತ ಕ್ರಮವಹಿಸಲಾಗುವುದು ಎಂದರು.
ತಾಲೂಕಿನಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಕೊರತೆಯಾಗಿಲ್ಲ. ನಾನು ಮಂತ್ರಿಯಾದರೂ ಆಷ್ಟೆ. ಇಲ್ಲದಿದ್ದರೂ ಅಷ್ಟೆ ಎಂದಿಗೂ ಕ್ಷೇತ್ರದ ಅಭಿವೃದ್ಧಿ ನಿಲ್ಲಲ್ಲ ಈಗಾಗಲೇ 300 ಕೋಟಿ ವೆಚ್ಚದಲ್ಲಿ 54 ಕೆರೆಗಳ ದುರಸ್ಥಿ ಸೇರಿ, ಕೆರೆಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದ್ದು, ಪ್ರತಿ ಹಳ್ಳಿಗೂ ಜಿಜಿಎಂ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.
ತಹಶೀಲ್ದಾರ್ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಕಚೇರಿಗೆ ಸಾರ್ವಜನಿಕರು ಬರುವುದು ಸಹಜ. ಆದರೆ, ಅಧಿಕಾರಿಗಳೇ ಸಾರ್ವ ಜನಿಕರ ಮನೆ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸುವುದೇ ಈ ಜನಸ್ಪಂದನಾ ಕಾರ್ಯಕ್ರಮದ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಎಸಿ ಗೊಟೂರು ಶಿವಪ್ಪ, ತಾ.ಪಂ. ಇಓ ಲಕ್ಷ್ಮಣ್, ಎಡಿ ಧನಂಜಯ್, ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಸ್, ಮಾಜಿ ಎಪಿಎಂಸಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಡಿವೈಎಸ್ಪಿ ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ತುಂಗೋಟಿ ರಾಮಣ್ಣ ಇತರರು ಹಾಜರಿದ್ದರು.




