
VIJAYANAGARA : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದಲ್ಲಿ ಪಾರ್ವತಿ ಎಂಬ ಮಹಿಳೆ, ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಮನೆ ಬಾಗಿಲನ್ನು ಮಾಡಿಸಿದ್ದಾರೆ. ಸುಮಾರು 15 ತಿಂಗಳ ಕಾಲ ಪಡೆದ ಹಣವನ್ನು ಕೂಡಿಟ್ಟು, ಅವರು ತನ್ನ ಮನೆಗೆ ಹೊಸ ಬಾಗಿಲು ಹಾಕಿಸಿಕೊಂಡಿದ್ದು, ಅದರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೆತ್ತಿಸಿದ್ದಾರೆ.
ಈ ಬಾಗಿಲಿನಲ್ಲಿ ಸಿದ್ದರಾಮಯ್ಯ ಅವರು ನಿಂತಿರುವ ಭಾವಚಿತ್ರವಿದ್ದು, ಅದರ ಕೆಳಭಾಗದಲ್ಲಿ “ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ – ಗೃಹಲಕ್ಷ್ಮಿ ಯೋಜನೆ” ಎಂಬ ಬರೆಹವನ್ನೂ ಸೇರಿಸಲಾಗಿದೆ. ಸರ್ಕಾರದ ಯೋಜನೆಯಿಂದ ಲಾಭ ಪಡೆದ ಮಹಿಳೆಯೊಬ್ಬರು ಈ ರೀತಿಯಾಗಿ ಧನ್ಯವಾದ ವ್ಯಕ್ತಪಡಿಸಿರುವುದು ವಿಶಿಷ್ಟ ಗಮನ ಸೆಳೆಯುತ್ತಿದೆ.
ಇನ್ನು ಗೃಹಲಕ್ಷ್ಮಿ ಹಣದಿಂದಲೇ ಸಿಎಂಗೆ ವಿನೂತನ ರೀತಿಯಲ್ಲಿ ಈ ಬಡ ಕುಟುಂಬ ಅಭಿನಂದನೆ ಸಲ್ಲಿಸಿದೆ. ಇನ್ನೂ ಸಿದ್ದರಾಮಯ್ಯ ಭಾವಚಿತ್ರವಿರೋ ಮುಖ್ಯದ್ವಾರದ ವೀಕ್ಷಣೆಗೆ ಅಕ್ಕಪಕ್ಕದ ಗ್ರಾಮದವರು ಆಗಮಿಸುತ್ತಿದ್ದಾರೆ.




