
MADIKERI NEWS : ನಾಡ ಹಬ್ಬ ಮಡಿಕೇರಿ ದಸರಾಗೂ ದಿನಗಣನೆ ಆರಂಭವಾಗಿದ್ದು ದಸರಾ ಕೆಲಸಗಳು ಒಂದೊದ್ದಾಗಿ ಆರಂಭವಾದ ಹಿನ್ನಲೆ ಇಂದು ಕೊಡಗು-ಮೈಸೂರು ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಡಿಕೇರಿಯ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆ ಪ್ರಕ್ರಿಯೆ ಕೋಟೆ ಮಹಾ ಗಣಪತಿ ದೇವಾಲಯದಿಂದ ಆರಂಭವಾಗಿ, ಓಂಕಾರೇಶ್ವರ ದೇವಾಲಯ ಹಾಗೂ ನಾಲ್ಕು ಕರಗ ದೇವಾಲಯಗಳ ಮೂಲಕ, ದಶಮಂಟಪಗಳ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.

ಪೂಜೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಯಧುವೀರ್ ಒಡೆಯರ್, “ಹಿಂದಿನಂತೆ ಸಾಂಪ್ರದಾಯಿಕವಾಗಿ ಹಾಗೂ ಭಕ್ತಿಭಾವದಿಂದ ಮಡಿಕೇರಿ ದಸರಾವನ್ನು ಈ ವರ್ಷವೂ ನಡೆಸಿಕೊಳ್ಳ ಲಾಗುತ್ತದೆ“ಎಂದು ತಿಳಿಸಿದರು.
ಇದೀಗ ಮೈಸೂರಿನಲ್ಲೂ ದಸರಾ ಕಾರ್ಯಾರಂಭವಾಗಿರುವ ಕಾರಣ, ಅಲ್ಲಿನ ಪೂಜೆಗಳಲ್ಲಿ ಭಾಗವಹಿಸ ಬೇಕಾದ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಕಾರ್ಯಕ್ರಮದ ಸಂದರ್ಭದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದರು. ಆದ್ದರಿಂದ, ದಸರಾ ಕಾರ್ಯಕ್ರಮದ ಮೊದಲು ಮಡಿಕೇರಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾಗಿ ಹೇಳಿದರು.




