Chitradurga : ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡಲು ಮುಳ್ಳು ಪೊದೆಗಳ ಮಧ್ಯೆ ಗಿಡಿಗೇಡಿಗಳು ಅಡಗಿಸಿಟ್ಟಿದ್ದರು.

Chitradurga : ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡಲು ಮುಳ್ಳು ಪೊದೆಗಳ ಮಧ್ಯೆ ಗಿಡಿಗೇಡಿಗಳು ಅಡಗಿಸಿಟ್ಟಿದ್ದರು. ಈ ಕಾಳಸಂತೆಕೋರರ ಮೇಲೆ ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಮಧ್ಯರಾತ್ರಿ ದಾಳಿ ನಡೆಸಿದ್ರು. ಈ ವೇಳೆ ನೂರಾರು ಚೀಲಗಳ ಪಡಿತರ ಅಕ್ಕಿಯನ್ನ ವಶಪಡಿಸಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಶೀರೆಕೊಳ ಗ್ರಾಮದಲ್ಲಿ ನಡೆದಿದೆ.
ಇದನ್ನು ಓದಿ : ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ
ಖಚಿತ ಮಾಹಿತಿ ಮೇರೆಗೆ ಅಸಿಸ್ಟೆಂಟ್ ಕಮಿಷನರ್ ಮೆಹಬೂಬ್ ಜಿಲಾನಿ ಖುರೇಸಿ ಅವರ ನೇತೃತ್ವದ ತಂಡ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಳಿ ನಡೆಸಿದ್ರು. ಇನ್ನು ಅಧಿಕಾರಿಗಳು ಸ್ಥಳಕ್ಕೆ ಬರುತ್ತಿರುವ ಸುದ್ದಿ ತಿಳಿಯುತ್ತಿದ್ದಂತಯೇ ಕಾಳಸಂತೆಕೋರರು ಸ್ಥಳದಿಂದ ಪರಾರಿಯಾಗಿದ್ದು, ಮುಳ್ಳು ಪೊದೆಗಳ ಮಧ್ಯೆ ಅಡಗಿಸಿಟ್ಟಿದ್ದ ನೂರಾರು ಚೀಲ ಅನ್ನಭಾಗ್ಯದ ಪಡಿತರ ಅಕ್ಕಿಯನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆಯ PSI ಬಾಹುಬಲಿ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪಡಿತರ ಅಕ್ಕಿ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನು ನೋಡಿ : ವ್ಯಾಪಾರಕ್ಕೆ ಅವಕಾಶ ಕೊಡಲಿಲ್ಲ ಅಂತ ವ್ಯಕ್ತಿ ಪುರಸಭೆಗೆ ಬೆಂಕಿ ಇಟ್ಟೆಬಿಟ್ಟ




