Kolar : ಶಾಲೆಗೆಂದು ಹೋದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ತಾಲೂಕಿನ ನರಸಾಪುರ ಗ್ರಾಮದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಆತಂಕ ಉಂಟುಮಾಡಿದೆ.
ಶಾಲೆಗೆಂದು ಹೊರಟು ಮರಳಿ ಬಾರದವರು
ನರಸಾಪುರ ಗ್ರಾಮದ ಶರಣ್ಯ ಮತ್ತು ದೇವಿ ಎಂಬ ಹತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಶುಕ್ರವಾರ ಬೆಳಗ್ಗೆ ಶಾಲೆಗೆಂದು ಮನೆಯಿಂದ ಹೊರಟಿದ್ದರು. ಆದರೆ ದಿನವಿಡೀ ಶಾಲೆಗೆ ಹೋಗದೆ, ಮನೆಗೂ ಮರಳದೇ ಕಣ್ಮರೆಯಾಗಿದ್ದಾರೆ.
ಪೋಷಕರಲ್ಲಿ ಆತಂಕ, ಇಡೀ ದಿನ ಹುಡುಕಾಟ
ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಶುಕ್ರವಾರ ಇಡೀ ದಿನ ಗ್ರಾಮದ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ರಾತ್ರಿಯಾದರೂ ಯಾವುದೇ ಸುಳಿವು ಸಿಕ್ಕಿಲ್ಲದ ಕಾರಣ, ಪೋಷಕರು ಕೋಲಾರ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇದನ್ನು ಓದಿ : ಕೊಹ್ಲಿ, ಸಚಿನ್ ಜತೆ ಎಲೈಟ್ ಪಟ್ಟಿ ಸೇರಿದ ರೋಹಿತ್

ಪೊಲೀಸರು ತೀವ್ರ ಹುಡುಕಾಟ ಆರಂಭ
ಪೊಲೀಸರು ಶರಣ್ಯ ಮತ್ತು ದೇವಿ ಎಂಬ ವಿದ್ಯಾರ್ಥಿನಿಯರ ಪತ್ತೆಗಾಗಿ ತನಿಖೆ ಆರಂಭಿಸಿದ್ದು, ವಿವಿಧ ಪ್ರದೇಶಗಳಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ವಿದ್ಯಾರ್ಥಿನಿಯರು ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ 24 ಗಂಟೆಗಳಾದರೂ ಲಭ್ಯವಾಗಿಲ್ಲ.
ಸಾರ್ವಜನಿಕರ ಸಹಕಾರ ಕೋರಿಕೆ
ಇನ್ನು ಪೊಲೀಸರು ಮತ್ತು ಪೋಷಕರು ಇಬ್ಬರು ಹುಡುಗಿಯರ ಪತ್ತೆಗೆ ಸಾರ್ವಜನಿಕರಿಂದ ಸಹಕಾರ ಕೋರಿದ್ದಾರೆ. ಯಾವುದೇ ಮಾಹಿತಿ ದೊರೆತರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ತಿಳಿಸಲು ಮನವಿ ಮಾಡಲಾಗಿದೆ.

ಇದನ್ನು ನೋಡಿ : Kolar | ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ




