FIRE : ವ್ಯಕ್ತಿಯೋರ್ವ ಪುರಸಭೆಗೆ ನುಗ್ಗಿ ಮುಖ್ಯ ಅಧಿಕಾರಿ ಕಚೇರಿಯ ಟೇಬಲ್ ಮೇಲೆ ಇದ್ದಂತಹ ಕಡತಗಳಿಗೆ ಬೆಂಕಿ ಹಾಕಿರುವ ಘಟನೆ ಹಾಸನದಲ್ಲಿ ನಡೆದಿದೆ.

ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಪುರಸಭೆ ಅವಕಾಶ ನೀಡಲಿಲ್ಲ ಎಂದು ರೊಚ್ಚಿಗೆದ್ದ ವ್ಯಕ್ತಿಯೋರ್ವ ಪುರಸಭೆಗೆ ನುಗ್ಗಿ ಮುಖ್ಯ ಅಧಿಕಾರಿ ಕಚೇರಿಯ ಟೇಬಲ್ ಮೇಲೆ ಇದ್ದಂತಹ ಕಡತಗಳಿಗೆ ಬೆಂಕಿ ಹಾಕಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಇನ್ನು ಕುಶಾಲನಗರ ಬಡಾವಣೆಯ ನಿವಾಸಿ ನಿಂಗರಾಜ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದ ಮುಂಭಾಗ ನಿಂಗರಾಜ್ ಸಹೋದರ ಅಣ್ಣಪ್ಪ ಹಲವು ದಿನಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ರು, ದೀಪಾವಳಿ ಹಿನ್ನಲೆ ಆ ಜಾಗದಲ್ಲಿ ಬೇರೆಯೊಬ್ರು ಪಟಾಕಿ ಅಂಗಡಿಗಳನ್ನ ಹಾಕಿದ್ರು.
ಇದನ್ನು ಓದಿ : ಕಲಾಂಕಾರಿ ಎಥ್ನಿಕ್ವೇರ್ನಲ್ಲಿ ಕಂಗೊಳಿಸಿದ ರುಕ್ಮಿಣಿ ವಸಂತ್

ಹೀಗಾಗಿ ಪುರಸಭೆ ಅಧಿಕಾರಿಗಳು ತರಕಾರಿ ಅಂಗಡಿಯನ್ನ ಪಕ್ಕಕ್ಕೆ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಇದಕ್ಕೆ ನಿಂಗರಾಜ್ ಆಕ್ಷೇಪ ವ್ಯಕ್ತಪಡಿಸಿ ಪುರಸಭೆಗೆ ಬಂದು ಗಲಾಟೆಯನ್ನ ಮಾಡಿದ್ದಲ್ಲದೇ ನಂತರ ಸಂಜೆ ವೇಳೆ ಬಂದು ಕಚೇರಿಯಲ್ಲಿ ಯಾರು ಇರದ್ದನ್ನ ಗಮನಿಸಿ ಮುಖ್ಯ ಅಧಿಕಾರಿ ಕಚೇರಿಯ ಕಡತಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಪರಾರಿಯಾಗಿದ್ದಾನೆ,
ಇನ್ನು ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನ ವಶಕ್ಕ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನು ನೋಡಿ : ಹದಗೆಟ್ಟ ರಸ್ತೆಯಲ್ಲಿ ನಾಟಿ ಮಾಡಿದ ರೈತರು – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ




