Kitchen Recipe : Onion Cheese Pakora Recipe ಸಂಜೆ ಟೀ ಸಮಯದಲ್ಲಿ ಅಥವಾ ಅತಿಥಿಗಳಿಗೆ ಸರ್ವ್ ಮಾಡಲು ಪರಿಪೂರ್ಣ ಸ್ನ್ಯಾಕ್!
ಈರುಳ್ಳಿ ಮತ್ತು ಚೀಸ್ನ ಮಿಶ್ರಣದಿಂದ ತಯಾರಾಗುವ ಈ ಪಕೋಡಾ ಹೊರಗೆ ಕ್ರಿಸ್ಪಿ, ಒಳಗೆ ಮೆಲ್ಟ್ ಆಗುವ ಚೀಸ್ನಿಂದ ತುಂಬಿರುತ್ತದೆ.

ಬೇಕಾಗುವ ಪದಾರ್ಥಗಳು (Ingredients for Onion Cheese Pakoda)
- ಕಡಲೆಹಿಟ್ಟು – 100 ಗ್ರಾಂ
- ಅಕ್ಕಿಹಿಟ್ಟು – 40 ಗ್ರಾಂ
- ಈರುಳ್ಳಿ – 2 ದೊಡ್ಡದು (ತೆಳ್ಳಗೆ ಹೆಚ್ಚಿಟ್ಟುಕೊಳ್ಳಿ)
- ದನಿಯಾ ಪುಡಿ – ½ ಚಮಚ
- ಜೀರಿಗೆ – ½ ಚಮಚ
- ಖಾರದಪುಡಿ – 1 ಚಮಚ
- ಅರಿಶಿನ – ಸ್ವಲ್ಪ
- ಕಾಳು ಮೆಣಸಿನ ಪುಡಿ – ½ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಕರಿಬೇವು – ಸ್ವಲ್ಪ
- ಹಸಿಮೆಣಸಿನಕಾಯಿ – 4 (ಸಣ್ಣಗೆ ಹೆಚ್ಚಿಟ್ಟುಕೊಳ್ಳಿ)
- ಚೀಸ್ – 200 ಗ್ರಾಂ
- ಎಣ್ಣೆ – ಕರಿಯಲು ಅಗತ್ಯವಷ್ಟು
MUST READ : Kitchen Recipe : Gobi Pepper Dry Recipe ಗೋಬಿ ಪೆಪ್ಪರ್ ಡ್ರೈ
ಈರುಳ್ಳಿ ಚೀಸ್ ಪಕೋಡಾ ಮಾಡುವ ವಿಧಾನ (How to Make Onion Cheese Pakoda)
1️⃣ ಹಿಟ್ಟಿನ ಮಿಶ್ರಣ ತಯಾರಿ
ಮೊದಲು ಒಂದು ಬೌಲ್ನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಖಾರದಪುಡಿ, ಅರಿಶಿನ, ದನಿಯಾ ಪುಡಿ, ಜೀರಿಗೆ, ಕಾಳುಮೆಣಸಿನ ಪುಡಿ, ಕರಿಬೇವು, ಹಸಿಮೆಣಸಿನ ಕಾಯಿ, ಉಪ್ಪು ಮತ್ತು ತುರಿದ ಚೀಸ್ ಸೇರಿಸಿ.
ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಸ್ವಲ್ಪ ನೀರು ಸೇರಿಸಿ ದಪ್ಪವಾದ ಬ್ಯಾಟರ್ ತಯಾರಿಸಿ.
2️⃣ ಚೀಸ್ ಫಿಲ್ಲಿಂಗ್ ತಯಾರಿಸಿ
ಚೀಸ್ ಅನ್ನು ಮೊದಲು ಸ್ವಲ್ಪ ತುರಿದುಕೊಳ್ಳಿ.
ಮತ್ತಷ್ಟು 10 ಪೀಸ್ ಗಾತ್ರದ ತುಂಡುಗಳನ್ನಾಗಿ ಕತ್ತರಿಸಿ ಇಟ್ಟುಕೊಳ್ಳಿ.
3️⃣ ಉಂಡೆ ಮಾಡಿ ಚೀಸ್ ಹಾಕಿ
ತಯಾರಿಸಿದ ಹಿಟ್ಟಿನಿಂದ ಉಂಡೆ ಮಾಡಿ, ಅದರ ಮಧ್ಯೆ ಚೀಸ್ ಪೀಸ್ ಇಟ್ಟು ಮತ್ತೆ ಮುಚ್ಚಿ ಉಂಡೆಯಂತೆ ಮಾಡಿ.
4️⃣ ಕರಿಯುವುದು
ಕಾದ ಬಿಸಿ ಎಣ್ಣೆಯಲ್ಲಿ ಈ ಉಂಡೆಗಳನ್ನು ಹಾಕಿ,
ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.
ಹೊರಗೆ ಕ್ರಿಸ್ಪಿ, ಒಳಗೆ ಚೀಸ್ ಮೆಲ್ಟ್ ಆಗುವಷ್ಟು ಬಿಸಿ ಇರಲಿ.
5️⃣ ಸರ್ವ್ ಮಾಡಿ ಸವಿಯಿರ
ಇದೀಗ ರುಚಿಕರವಾದ ಈರುಳ್ಳಿ ಚೀಸ್ ಪಕೋಡಾ ಸವಿಯಲು ಸಿದ್ಧ!
ಟೊಮೇಟೊ ಸಾಸ್ ಅಥವಾ ಹಸಿಮೆಣಸಿನ ಚಟ್ನಿಯ ಜೊತೆ ಸವಿಯಬಹುದು.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |
ಟಿಪ್ಸ್ (Pro Tips for Perfect Cheese Pakoda)
- ಬ್ಯಾಟರ್ ತುಂಬಾ ತೆಳುವಾಗದಂತೆ ನೋಡಿಕೊಳ್ಳಿ.
- ಚೀಸ್ ಪೀಸ್ಗಳನ್ನು ತುಂಬಾ ಸಣ್ಣದಾಗ ಕತ್ತರಿಸಬೇಡಿ, ಮೆಲ್ಟ್ ಆಗಲು ಮಧ್ಯಮ ಗಾತ್ರವೇ ಸೂಕ್ತ.
- ಬಿಸಿ ಎಣ್ಣೆ ಮಧ್ಯಮ ತಾಪಮಾನದಲ್ಲಿರಲಿ, ಅತಿ ಬಿಸಿ ಎಣ್ಣೆಯಲ್ಲಿ ಹೊರಗೆ ಸುಟ್ಟು ಒಳಗೆ ಕಚ್ಚಾಗಬಹುದು.




