Pratap Simha vs Pradeep Eshwar : ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವೆ ತೀವ್ರ ವಾಗ್ವಾದ (Pratap Simha Pradeep Eshwar verbal fight) ಜೋರಾಗಿದೆ.

Pratap Simha vs Pradeep Eshwar : ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವೆ ತೀವ್ರ ವಾಗ್ವಾದ (Pratap Simha Pradeep Eshwar verbal fight) ಜೋರಾಗಿದೆ. ಪರಸ್ಪರ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ.
ಪ್ರತಾಪ್ ಸಿಂಹರಿಂದ ಲೇವಡಿ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ತಮ್ಮ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ಮುಳ್ಳಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್! ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ!” ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಅದೇ ವೇಳೆ ಅವರು, “ಪ್ರದೀಪ್ ಈಶ್ವರ್ ಅವರ ಭಾಷೆಯಲ್ಲಿ ಉತ್ತರ ನೀಡಿರುವುದಕ್ಕೆ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ” ಎಂದರು.
MUST READ : Karnataka Politics :ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ – ಯತೀಂದ್ರ
ಪ್ರದೀಪ್ ಈಶ್ವರ್ನ ತಿರುಗೇಟು
ಇತ್ತ ಚಿಕ್ಕಬಳ್ಳಾಪುರದಲ್ಲಿ ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ತಿರುಗೇಟು ನೀಡಿದರು.
“ಎಷ್ಟು ಜನ ಗೌಡರ ಮಕ್ಕಳಿಗೆ ನೀನು ನೆರವಾಗಿದ್ದೀಯಾ? ನಾನು ನನ್ನ ಕ್ಷೇತ್ರದಲ್ಲಿ 2,500 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇನೆ. ನನಗೆ ‘ಅಯೋಗ್ಯ’ ಅಂತ ಹೇಳ್ತಾರೆ, ಆದರೆ ನಾನು ಜನರ ಕೆಲಸ ಮಾಡ್ತೀನಿ,” ಎಂದು ಹೇಳಿದರು.
ಅದೇ ವೇಳೆ ವ್ಯಂಗ್ಯವಾಗಿ, “ಪ್ರತಾಪ್ ಅವರಿಗೆ 50-50 ಬಿಸ್ಕತ್ ಫೆವರೇಟ್” ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ವೈಯಕ್ತಿಕ ಟೀಕೆ ವಿವಾದ
ಈ ವಾಕ್ಸಮರದ ಹಿನ್ನೆಲೆಯಲ್ಲಿ (Karnataka Political Controversy), ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರನ್ನೂ ಟೀಕಿಸುತ್ತಾ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ರಾಜಕೀಯದಲ್ಲಿ ವೈಯಕ್ತಿಕ ಟೀಕೆಗಳು ಅತಿಯಾಗಿ ನಡೆಯುತ್ತಿರುವುದನ್ನು ತಜ್ಞರು ಖಂಡಿಸಿದ್ದಾರೆ.
ಇದನ್ನು ನೋಡಿ : ಕೆರೆಗೆ ಬಿದ್ದು ತಂದೆ–ಮಗಳು ಸೇರಿ ಮೂವರು ಸಾವು




