BBK 12 : ಬಿಗ್ ಬಾಸ್ ಸೀಸನ್ 12 ರಲ್ಲಿ ಮೊದಲ ಬಾರಿಗೆ ಇದೀಗ ಕ್ಯಾಪ್ಟನ್ಸಿ ಟಾಕ್ಸ್ ಅನ್ನು ನಡೆಸಲಾಗುತ್ತಿದೆ. ಇದರ ಬೆನ್ನಲ್ಲಿಯೇ ಕಳಪೆಯನ್ನು ಕೂಡ ಆಯ್ಕೆ ಮಾಡಲಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಮೊದಲ ಬಾರಿಗೆ ನಡೆದ ಕ್ಯಾಪ್ಟನ್ಸಿ ಟಾಕ್ಸ್ ಬಳಿಕ, ಕಳಪೆ ಆಯ್ಕೆ ಪ್ರಕ್ರಿಯೆಯಲ್ಲಿ ಅಶ್ವಿನಿ ಗೌಡ ಅವರಿಗೆ ಹೆಚ್ಚು ಮಂದಿ ಸ್ಪರ್ಧಿಗಳು ಕಳಪೆ ಕೊಟ್ಟಿದ್ದಾರೆ.
ಇದರ ಪರಿಣಾಮವಾಗಿ ಅಶ್ವಿನಿ ಗೌಡ ಅವರನ್ನು ಬಿಗ್ ಬಾಸ್ ಮನೆಯ ಜೈಲಿಗೆ ಕಳುಹಿಸಲಾಗಿದೆ.
ಕಳಪೆ ಘೋಷಣೆ ವೇಳೆ ಗಲಾಟೆ
ಕಲರ್ಸ್ ಕನ್ನಡ ವಾಹಿನಿಯಿಂದ ಬಿಡುಗಡೆಯಾದ ಪ್ರೋಮೋದಲ್ಲಿ ಮ್ಯೂಟಂಟ್ ರಘು ಅವರು, “ಕಳಪೆ ಅಂದ್ರೆ ನಾನು ಅಶ್ವಿನಿ ಮೇಡಂಗೆ ಕೊಡ್ತೀನಿ” ಎಂದು ಘೋಷಣೆ ಮಾಡುತ್ತಾರೆ.
ಇದನ್ನು ಕೇಳಿದ ಅಶ್ವಿನಿ ಗೌಡ ಅವರು ಕೋಪದಿಂದ “ಥ್ಯಾಂಕ್ಸ್!” ಎಂದು ಎದ್ದು ಮಾತನಾಡಿ, ಕಳಪೆಯ ಉಡುಪು ಧರಿಸಿ ಜೈಲಿನತ್ತ ತೆರಳುತ್ತಾರೆ.
ಜೈಲಿನೊಳಗಿನ ಡ್ರಾಮಾ
ಜೈಲಿನಲ್ಲಿ ಅಶ್ವಿನಿ ಗೌಡ ಅವರಿಗೆ ತರಕಾರಿ ಕತ್ತರಿಸುವ ಟಾಸ್ಕ್ ನೀಡಲಾಗುತ್ತದೆ. ಆದರೆ ಅವರು “ನಾನು ಯಾವಾಗ ಬೇಕಾದರೂ ಕತ್ತರಿಸುತ್ತೀನಿ” ಎಂದು ಹೇಳಿ ಆಟವಾಡುತ್ತಾ ಕುಳಿತಾರೆ.
ಇದಕ್ಕೆ ರಕ್ಷಿತಾ ಶೆಟ್ಟಿ “ಇವಾಗಲೇ ಕತ್ತರಿಸಿ ಕೊಡಿ” ಎಂದಾಗ, ಅಶ್ವಿನಿ ಗೌಡ “ಇವಾಗಲೇ ಅಂತೆ?” ಎಂದು ಪ್ರಶ್ನೆ ಎತ್ತುತ್ತಾರೆ.
ಇದನ್ನು ಓದಿ : ಗಾಯಕಿ ವಾರಿಜಶ್ರೀ ಜೊತೆ ನೆರವೇರಿತು ರಘು ದೀಕ್ಷಿತ್ ಮದುವೆ

“ಡೋಂಟ್ ಟಚ್ ಮಿ!”
ಮ್ಯೂಟಂಟ್ ರಘು ಅವರು ಅಶ್ವಿನಿ ಅವರನ್ನು ವಾಪಸ್ ಜೈಲಿನೊಳಗೆ ಕಳುಹಿಸಲು ಯತ್ನಿಸಿದಾಗ, ಅಶ್ವಿನಿ ಗೌಡ “ಡೋಂಟ್ ಟಚ್ ಮಿ” ಎಂದು ಕೂಗುತ್ತಾರೆ. ಈ ದೃಶ್ಯ ಈಗ ಪ್ರೇಕ್ಷಕರ ಗಮನ ಸೆಳೆದಿದೆ
ಆಟದ ಒಳಗಿನ ರಾಜಕೀಯ
ಇನ್ನು ಈ ಮಧ್ಯೆ ಕಾಕ್ರೋಚ್ ಸುಧಿ “ನೀವು ಕೊಯ್ದು ಕೊಟ್ಟ್ರೆ, ನಾವು ಅಡುಗೆ ಮಾಡಿಕೊಂಡು ತಿಂದ್ರಿ” ಎಂದಾಗ, ಅಶ್ವಿನಿ ಗೌಡ “ನಮ್ಮ ಬಾರ್ಡರ್ ಒಳಗೆ ಬಂದರೆ ನಾವು ಆಡಿದ್ದೇ ಆಟ” ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರ ಈ ವರ್ತನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಎಪಿಸೋಡ್ಗ ಳಲ್ಲಿ ಈ ಘಟನೆಯ ಮುಂದುವರಿಕೆ ಹೇಗಿರಬಹುದು ಎನ್ನುವುದು ಕೌತುಕವಾಗಿದೆ.

ಇದನ್ನು ನೋಡಿ : ಚಿಕ್ಕಬಳ್ಳಾಪುರ ಘೋರ ದುರಂತ ಬೈಕ್ ಬಸ್ ನಡುವೆ ಡೆಡ್ಲಿ ಆಕ್ಸಿಡೆಂಟ್..!




