Tumakuru : ತುಮಕೂರು ನಗರ ಕೇವಲ ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಅಂತಾ ಮಾತ್ರ ಫೇಮಸ್ ಆಗಿಲ್ಲ, ಗುಂಡಿಗಳ ಸಿಟಿ ಅಂತಾನೂ ಇತ್ತೀಚೆಗೆ ಫೇಮಸ್ ಆಗ್ತಿದೆ.

Tumakuru : ತುಮಕೂರು ನಗರ ಕೇವಲ ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಅಂತಾ ಮಾತ್ರ ಫೇಮಸ್ ಆಗಿಲ್ಲ, ಗುಂಡಿಗಳ ಸಿಟಿ ಅಂತಾನೂ ಇತ್ತೀಚೆಗೆ ಫೇಮಸ್ ಆಗ್ತಿದೆ. ನಗರದ ಬಹುತೇಕ ಕಡೆ ರಸ್ತೆಗಳೆಲ್ಲಾ ಗುಂಡಿಮಯವಾಗಿದ್ದು, ಗುಂಡಿಗಳಿಂದ ಸಾಕಷ್ಟು ಮಂದಿ ಬಿದ್ದು ಆಸ್ಪತ್ರೆ ಪಾಲಾಗ್ತಾ ಇದ್ದಾರೆ.
ನಗರದ ಸರಸ್ವತಿಪುರಂನ ದೇವರಾಜು ಅರಸು ರಸ್ತೆಯಲ್ಲಿ ತುಂಬಾ ಗುಂಡಿಗಳು ಬಿದ್ದು, ಸಾರ್ವಜನಿಕರು ದಿನನಿತ್ಯ ಸಂಚರಿಸಲು ಕಷ್ಟಪಡುವಂತಾಗಿದೆ. ಇನ್ನು ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು, ಶಾಲಾ ವಿದ್ಯಾರ್ಥಿಗಳು ಓಡಾಡ್ತಾ ಇದ್ದು, ವಾಹನ ಸವಾರರು ಬಿದ್ದು ಆಸ್ಪತ್ರೆ ಪಾಲಾಗ್ತಾ ಇದಾರೆ.
ಆದ್ರೆ ಅಧಿಕಾರಿಗಳು ಮಾತ್ರ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗದೇ ಬರೀ ಜಲ್ಲಿ ತಂದು ಸುರಿದು ಹೋಗುವ ಕೆಲಸ ಮಾಡಿದ್ದಾರೆ. ಇದ್ರಿಂದ ಜಲ್ಲಿ ಕಲ್ಲು ರಸ್ತೆಯಲ್ಲಿ ಓಡಾಡುವ ಜನರಿಗೆ ಸಿಡಿದು ತೊಂದ್ರೆ ಹೆಚ್ಚಾಗಿದೆ. ನಾವೇ ರಸ್ತೆಗೆ ಮಣ್ಣು ಹೊಡೆದು ತಾತ್ಕಾಲಿಕವಾಗಿ ಗುಂಡಿ ಮುಚ್ಚಿದ್ದೇವೆ ಅಂತ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕಿದ್ರು.
ಇದನ್ನು ಓದಿ : KSDL ಸಂಸ್ಥೆಯಿಂದ ಸರ್ಕಾರಕ್ಕೆ ₹135 ಕೋಟಿ ಡಿವಿಡೆಂಡ್ ಚೆಕ್ ಹಸ್ತಾಂತರ

ಇನ್ನು ಈ ರಸ್ತೆಯಲ್ಲಿ ಎರಡು ಮೂರು ಅಡಿಯಷ್ಟು ಗುಂಡಿಗಳು ಬಿದ್ದಿರೋದ್ರಿಂದ ವಾಹನ ಸವಾರರು, ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ತೊಂದ್ರೆ ಆಗ್ತಾ ಇದ್ದು, ಹಲವಾರು ಅಪಘಾತಗಳಾಗ್ತಿವೆ. ಆದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಬೇಜವಾಬ್ದಾರಿ ತೋರಿಸುತ್ತಿದ್ದಾರೆ.
ಅಲ್ದೇ ಪಾಲಿಕೆಯ ಅಧಿಕಾರಿಗಳು ಇದ್ದಾರೋ ಇಲ್ವೋ ಎಂದು ನಮಗೆ ಗೊತ್ತಾಗ್ತಾನೆ ಇಲ್ಲ, ಸ್ಮಾರ್ಟ ಸಿಟಿ ಅಂತಾರೆ ಆದ್ರೆ ಯಾವ ಅಭಿವೃದ್ದಿ ಕೆಲಸ ಸಹ ಆಗ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ರು.
ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸಿ ದೇವರಾಜ್ ಅರಸು ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಇದನ್ನು ನೋಡಿ : ರಾಜ್ಯದಲ್ಲೆ ಅಲ್ಲ ಇಡೀ ದೇಶದಲ್ಲೇ RSS ಬ್ಯಾನ್ ಆಗಲ್ಲ – CT RAVI




