SIRA NEWS : ಬರದ ನಾಡು ಎಂದೇ ಫೇಮಸ್ ಆಗಿರೋ ಶಿರಾ ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ಎಗ್ಗಿಲ್ಲದೇ ಮಣ್ಣು ಮಾಫಿಯಾ ನಡೆಯುತ್ತಿದೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ. ಕೆಲ ಕಿಡಿಗೇಡಿ ಗಳು ಕೆರೆ. ಕಟ್ಟೆ, ಸರ್ಕಾರಿ ಜಾಗ, ಅರಣ್ಯ ಪ್ರದೇಶದ ಭೂಮಿಗೆ ಕೈ ಹಾಕುತ್ತಿದ್ದು, ಹಿಟಾಚಿ, ಜೆಸಿನಿ ಬಳಸಿ ರಾತ್ರೋ ರಾತ್ರಿ ಮಣ್ಣನನ್ನು ಬಗೆಯುತ್ತಿದ್ದಾರೆ.
ಇಷ್ಟು ದಿನ ಮರಳು ಮಾಫಿಯಾ ನಡೆಯುತ್ತಿದ್ದು, ಇದೀಗ ಮಣ್ಣು ಮಾಫಿಯಾ ಹೆಚ್ಚಾಗಿದ್ದು, ಆಡಳಿತ ವ್ಯವಸ್ಥೆ ಬಗ್ಗೆ ಜನರಿಗೆ ಅಸಮಾಧಾನ ಭುಗಿಲೆದ್ದಿದೆ. ಶಿರಾ ತಾಲೂಕಿನ ಮುಷ್ಟಿಗರಹಳ್ಳಿ ಸಮೀಪ ಹಳ್ಳ ಸೇರಿದಂತೆ ವಿವಿಧ ಕಡೆ ಮಣ್ಣು ಮಾಫಿಯಾ ನಡೆಯುತ್ತಿರೋದು ಬೆಳಕಿಗೆ ಬಂದಿದೆ. ಇನ್ನು ರಾತ್ರೋ ರಾತ್ರಿ ಕೆರೆ, ಕಟ್ಟೆ, ಅರಣ್ಯ ಪ್ರದೇಶಕ್ಕೆ ನುಗ್ಗಿ ಹಿಟಾಚಿ, ಜೆಸಿಬಿ ಬಳಸಿ ಮಣ್ಣನ್ನು ಬಗೆದು ಟ್ರ್ಯಾಕ್ಟರ್, ಟಿಪ್ಪರ್ಗಲ್ಲಿ ಲೋಡ್ ಗಟ್ಟಲೆ ಮಣ್ಣನ್ನು ಸಾಗಾಟ ಮಾಡ್ತಾ ಇದ್ದಾರೆ. ಇನ್ನು ಖಾಸಗಿ ಲೇಔಟ್ಗಳಿಗೆ, ಜಮೀನುಗಳಿಗೆ ಇಂದಿಷ್ಟು ಹಣ ನಿಗಧಿಯಂತೆ ಲೋಡ್ ಗಟ್ಟಲೆ ಮಣ್ಣು ರಾಜಾರೋಷವಾಗಿ ಸಾಗಾಟ ಆಗ್ತಾ ಇದೆ. ರಾಜಾ ರೋಷವಾಗಿ ಮಣ್ಣು ಮಾಫಿಯಾ ನಡೆಯುತ್ತಿದ್ರು ಕೂಡ ಅಧಿಕಾರಿಗಳು ಕ್ರಮ ಕೈಗೊಳ್ಳದಿರೋ ಬಗ್ಗೆ ಅನುಮಾನ ವ್ಯಕ್ತವಾಗ್ತಿದೆ.

ಇನ್ನು ಮಣ್ಣು ಬಗೆಯಲು ಸರ್ಕಾರದಿಂದ ಯಾವುದೇ ಲೈಸೆನ್ಸ್ ಇಲ್ಲ, ಹೀಗಿದ್ರು ಕೂಡ ಮಣ್ಣು ಕಳ್ಳರು ನಿಯಮ ಮೀರಿ ಮಣ್ಣನ್ನು ಲೂಟಿ ಹೊಡೆಯುತ್ತಿರೋದು ಕಂಡು ಬಂದಿದೆ. ಇನ್ನಾದ್ರು ಈ ಬಗ್ಗೆ ಅಧಿಕಾರಿ ಗಳು ಎಚ್ಚೆತ್ತುಕೊಂಡು, ಮಣ್ಣು ಮಾಫಿಯಾಗೆ ಬ್ರೇಕ್ ಹಾಕ್ತಾರಾ ಎಂದು ಕಾದುನೋಡಬೇಕಿದೆ.
.





