
TUMAKURU : ತುಮಕೂರು ಜಿಲ್ಲಾ ವಿಷ್ಣು ಸೇನಾ ಸಮಿತಿ ವತಿಯಿಂದ ವಿನೋಬನಗರದ ಶ್ರೀ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ರತ್ನ, ಅಭಿನವ ಭಾರ್ಗವ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ 75 ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.
ಡಾಕ್ಟರ್ ವಿಷ್ಣುವರ್ಧನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೇಕ್ ಕತ್ತರಿಸಿ ಸಿಹಿ ಅಂಚಿ, ಅನ್ನ ಸಂತರ್ಪಣೆ ಮಾಡುವುದರ ಮೂಲಕ ಅತ್ಯಂತ ವಿಜೃಂಬಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮನೋಹರ್ ಗೌಡ, ಜಿಯಾ ಉಲ್ಲಾ ಖಾನ್, ಸಮಾಜ ಸೇವಕರಾದ ಶಬ್ಬೀರ್ ಅಹ್ಮದ್, ನಟರಾಜು, ತುಮಕೂರು ಜಿಲ್ಲಾ ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷರಾದ ಮೂರ್ತಿ ಎಸ್ ಸಿಂಹ, ಹಾಗೂ ಪದಾಧಿಕಾರಿಗಳಾದ ದಿವಾಕರ್, ರಮೇಶ್ ನಾಯಕ್, ಹೃದಯ ಚಂದನ್, ಡಾ. ವಿಷ್ಣು ವರ್ಧನ್ ಅಭಿಮಾನಿಗಳು ಹಾಜರಿದ್ದರು.





