
ACTOR UPENDRA BIRTHDAY : ನಿರ್ದೇಶಕ, ನಟ ಹಾಗೂ ಬರಹಗಾರರಾಗಿ ವಿಭಿನ್ನತನದಿಂದ ಗಮನ ಸೆಳೆದಿರುವ ನಟ ಉಪೇಂದ್ರಇಂದು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
1968ರ ಸೆಪ್ಟೆಂಬರ್ 18ರಂದು ಉಡುಪಿಯ ಕೋಟೇಶ್ವರದಲ್ಲಿ ಜನಿಸಿದ ಉಪೇಂದ್ರ ಅವರು, ತಮ್ಮ ಸಿನಿ ಜೀವನವನ್ನು ಹಿರಿಯ ನಿರ್ದೇಶಕ ಕಾಶೀನಾಥ್ ಅವರ ಸಹಾಯಕ ನಿರ್ದೇಶಕರಾಗಿ ಪ್ರಾರಂಭಿಸಿದರು. ನಂತರ “ಅನಂತನ ಅವಾಂತರ” (1989) ಚಿತ್ರದ ಮೂಲಕ ಅಭಿನಯ ರಂಗಕ್ಕೆ ಪ್ರವೇಶ ಮಾಡಿದರು.
“ತರ್ಲೆ ನನ್ಮಗ”, “ಶ್”, “ಸ್ವಸ್ತಿಕ್”, “ಓಂ”ಸೇರಿದಂತೆ ವಿಭಿನ್ನ ನಿರ್ದೇಶನ ಶೈಲಿಯ ಮೂಲಕ ಖ್ಯಾತಿ ಗಳಿಸಿದ ಅವರು, “ಎ” (1998) ಸಿನಿಮಾದ ಮೂಲಕ ನಾಯಕನಾಗಿ ಪ್ರೇಕ್ಷಕರ ಮುಂದೆ ಮಿಂಚಿದರು. ಈ ಚಿತ್ರದಲ್ಲಿ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಾಯಕನ ಪಾತ್ರ ಎಲ್ಲವನ್ನೂ ಉಪ್ಪಿ ಅವರು ತಮ್ಮದೇ ಶೈಲಿಯಲ್ಲಿ ನಿರ್ವಹಿಸಿ ಬಾಕ್ಸ್ ಆಫೀಸ್ ನಲ್ಲಿ ಸದ್ದುಮಾಡಿದರು. ಈ ಚಿತ್ರದ ಕ್ರೇಜ್ ಇಂದಿಗೂ ಜೀವಂತ ವಾಗಿದ್ದು, ಕನ್ನಡಕ್ಕೆ ಮಾತ್ರ ಸೀಮಿತವಾಗದೇ, ತೆಲುಗಿನಲ್ಲಿಸಹ ಡಬ್ ಆಗಿ ಯಶಸ್ಸು ಕಂಡಿತು.
ಉಪೇಂದ್ರ ನಟಿಸಿರುವ ಪ್ರೀತ್ಸೆ, ಸೂಪರ್ ಸ್ಟಾರ್, ಹಾಲಿವುಡ್, ರಕ್ತಕಣ್ಣೀರು, ಬುದ್ಧಿವಂತ, ಕಲ್ಪನಾ, S/o ಸತ್ಯಮೂರ್ತಿ, ಉಪ್ಪಿ2ಇತ್ಯಾದಿ ಹಲವಾರು ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
ವೈಯಕ್ತಿಕ ಜೀವನದಲ್ಲಿ ಉಪೇಂದ್ರ ಅವರು ನಟಿ ಪ್ರಿಯಾಂಕಾ ತ್ರಿವೇದಿ ಅವರನ್ನು 2003ರ ಡಿಸೆಂಬರ್ 14ರಂದು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ‘H2O’ ಚಿತ್ರದ ಚಿತ್ರೀಕರಣದ ವೇಳೆ ಅವರಿಬ್ಬರ ನಡುವಿನ ಪ್ರೀತಿ ಹುಟ್ಟಿ ಮದುವೆ ಆದರು.





