
BAGALKOT RAIN EFFECT : ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ, ನೂರಾರು ಎಕರೆಗಳಲ್ಲಿ ಬೆಳೆದ ಬೆಳೆಗಳು ನಾಶವಾಗಿದೆ.
ಇದರ ಜೊತೆಗೆ, ಇಳಕಲ್ ತಾಲೂಕಿನ ಗೋನಾಳ್ ಎಸ್ ಟಿ ಗ್ರಾಮದಲ್ಲಿ ಎರಡು ಮನೆಗಳು ಭಾರಿ ಹಾನಿಗೆ ಒಳಗಾಗಿವೆ. ಗ್ರಾಮದ ಮಹಾಂತೇಶ ಗೌಡರ್ಅವರ ಮನೆ ಸಂಪೂರ್ಣವಾಗಿ ಕುಸಿದಿದ್ದು, ಮನೆ ಮೇಲ್ಛಾ ವಣಿಯೇ ನೆಲಕ್ಕೆ ಬಿದ್ದಿದೆ. ಸದ್ಯ ಮನೆಯು ಸಂಪೂರ್ಣವಾಗಿ ಹಾಳಾಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಅದೇ ಗ್ರಾಮದಲ್ಲಿ ಯಂಕಣ್ಣ ಹಾಳಕೇರಿ ಎಂಬುವವರ ಮನೆಯ ಗೋಡೆಯ ಭಾಗ ಕುಸಿದಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಳೆಗೆ ಗೋಡೆ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಕುಟುಂಬದವರು ಮುನ್ನೆಚ್ಚರಿಕೆಯಾಗಿ ಪಕ್ಕದ ಮನೆಗೆ ಸರಿದಿದ್ದರು. ಕೆಲವೇ ಕ್ಷಣಗಳಲ್ಲಿ ಮನೆಯ ಮೇಲ್ಛಾವಣಿ ಕುಸಿತ ಸಂಭವಿಸಿದ್ದು, ತೀವ್ರ ಅನಾಹುತದಿಂದ ತಪ್ಪಿದಂತಾಗಿದೆ.




