ಕಾವೇರಿದ Bagalkot ಉಪ ಚುನಾವಣೆ ಪ್ರಚಾರ.

Bagalkot ಉಪಚುನಾವಣೆ ಪ್ರಚಾರ ಜೋರಾಗುತ್ತಿದ್ದಂತೆ ರಾಜಕೀಯ ಕಣವೂ ಕಾವೇರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದ ಶುರುವಾಗಿದೆ.
ಬಾಗಲಕೋಟೆ ತಾಲೂಕಿನ ರಾಂಪೂರ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು. ಇದೀಗ ಬೊಮ್ಮಯಿ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬಾಗಲಕೋಟೆ-ಬಾದಾಮಿ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ
ಪ್ರಚಾರದ ವೇಳೆ ಬೊಮ್ಮಯಿ ಅವರು, ಬಾದಾಮಿ ಜನರು ಸಿದ್ದರಾಮಯ್ಯ ಸಂಕಷ್ಟದಲ್ಲಿದ್ದಾಗ ಅವರ ಕೈ ಹಿಡಿದು ರಾಜಕೀಯ ಬದುಕು ನೀಡಿದ್ರು. ಆದ್ರೆ, ಅಧಿಕಾರಕ್ಕೆ ಬಂದ ನಂತರ ಬಾಗಲಕೋಟೆ-ಬಾದಾಮಿ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆ ಅಭಿವೃದ್ದಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ. ಯುಕೆಪಿ ಸೇರಿದಂತೆ ಪ್ರಮುಖ ಯೋಜನೆಗಳಿಗೆ ವೇಗ ನೀಡಿದ್ಧೆವೆ. ಆದ್ರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ಅಭಿವೃದ್ದಿಯಾಗಿಲ್ಲ ಎಂದು ಟೀಕಿಸಿದ್ರು.

READ THIS : ಜೀವ ಉಳಿಸೋ ಮೆಡಿಕಲ್ ಕ್ಷೇತ್ರಕ್ಕೂ ತಟ್ಟಿದ ಯುದ್ಧದ ಬಿಸಿ..!
ಬೊಮ್ಮಾಯಿ ಆರೋಪಗಳಿಗೆ ಕಾಂಗ್ರೆಸ್ ತಿರುಗೇಟು
ಇದೀಗ ಬೊಮ್ಮಾಯಿ ಆರೋಪಗಳಿಗೆ ಕಾಂಗ್ರೆಸ್ ತೀವ್ರ ತಿರುಗೇಟು ನೀಡಿದ್ದು, ಬಾಗಲಕೋಟೆ ಜನರಿಗೆ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ದ್ರೋಹ ಬಗೆದಿದ್ದರೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗ್ತಿತ್ತೆ ಎಂದು ಪ್ರಶ್ನಿಸಿದೆ. ಅಲ್ದೇ ರಾಜ್ಯಕ್ಕೆ ಬರಬೇಕಾದ ಸುಮಾರು 2 ಲಕ್ಷ ಕೋಟಿ ರೂಪಾಯಿ ಅನುದಾನ ನೀಡದೆ ಕನ್ನಡಿಗರಿಗೆ ದ್ರೋಹ ಬಗೆದಿರುವುದು ಬಿಜೆಪಿ ಸರ್ಕಾರ ಎಂದು ಗಂಭೀರ ಆರೋಪ ಮಾಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದರೂ ಮಹದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಜಾರಿಗೆ ತರದೆ ಉತ್ತರ ಕರ್ನಾಟಕದ ಜನರನ್ನು ವಂಚಿಸಿದ್ದು ಯಾರು ಎಂದು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಕಿಡಿಕಾರಿದೆ.

ರಾಜಕೀಯ ಕಣ ಇನ್ನಷ್ಟು ಕಾವೇರಿಸುವ ಸಾಧ್ಯತೆ
ಒಟ್ನಲ್ಲಿ, ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದ ತೀವ್ರಗೊಂಡಿದ್ದು, ಮತದಾರರ ಗಮನ ಸೆಳೆಯಲು ಎರಡೂ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ತಿವೆ. ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ಇನ್ನಷ್ಟು ಕಾವೇರಿಸುವ ಸಾಧ್ಯತೆ ಇದೆ.
MUST WATCH : GAS BOOK ಮಾಡಿ 3 ತಿಂಗಳಾದ್ರು ಕೊಡ್ತಿಲ್ಲ ಏಜೆನ್ಸಿಗೆಗೆ ಮುತ್ತಿಗೆ ಹಾಕಿ ಜನರ ಆಕ್ರೋಶ




