ಹೋಟೆಲ್, ಗ್ಯಾಸ್ ಆಯ್ತು.. Medical ಕ್ಷೇತ್ರಕ್ಕೂ ಯುದ್ಧದ ಎಫೆಕ್ಟ್..!

ಮಧ್ಯಪ್ರಾಚ್ಯದ ಯುದ್ಧದಿಂದ ಇಡಿ ದೇಶವೇ ತತ್ತರಿಸಿ ಹೋಗಿದೆ. ಅದರಲ್ಲೂ ದೇಶದಲ್ಲಿ LPG ಕೊರತೆಯಿಂದ ಹಲವು ಹೋಟೆಲ್ಗಳು ಬಂದ್ ಆಗಿದ್ದು, ಆಟೋ ಚಾಲಕರು ಗ್ಯಾಸ್ ಕೊರತೆಯಿಂದ ಕಂಗಾಲಾಗಿದ್ದಾರೆ. ಇದೆಲ್ಲದರ ನಡುವೆ ಇದೀಗ Medical ಕ್ಷೇತ್ರಕ್ಕೂ ಯುದ್ಧದ ಬಿಸಿ ತಟ್ಟಿದೆ.

ಔಷಧಿಗಳ ಬೆಲೆ ಕೂಡ 10-15% ಹೆಚ್ಚಳ
ಆಟೋ ಗ್ಯಾಸ್ ಬೆಲೆ ಏರಿಕೆ ಆಗುತ್ತಿದಂತೆ ಇದೀಗ ಔಷಧಿಗಳ ಬೆಲೆ ಕೂಡ 10-15% ಹೆಚ್ಚಳ ಆಗುವ ಆತಂಕ ಶುರುವಾಗಿದೆ. ಔಷಧಿಗಳ ತಯಾರಿಗೆ ಕಚ್ಚಾ ವಸ್ತುಗಳ ಕೊರತೆ ಇದೆ ಅಂತ ಈಗಾಗ್ಲೇ ಕರ್ನಾಟಕ ಫಾರ್ಮಾ ರಿಟೈಲರ್ಸ್ & ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಶನ್ (KPRDO) ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಇದರಿಂದಾಗಿ ರೋಗಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ. ಹೀಗಾಗಿ ಫಾರ್ಮಾಸ್ಯೂಟಿಕಲ್ ಮತ್ತು ಡಿಸ್ಟ್ರಿಬ್ಯೂಟರ್ಗಳು ಯುದ್ಧದಿಂದ ಸಾಕಷ್ಟು ಸವಾಲು ಎದುರಿಸುತ್ತಿದೆ.
READ THIS : ಮಹಿಳಾ ಪಿಎಸ್ಐ ಮೇಲೆ ಹಲ್ಲೆಗೆ ಯತ್ನ – FIR ಆಗಿದ್ರೂ ಆರೋಪಿಗಳ ಬಂಧನವಿಲ್ಲ.!

ತುರ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ
ಭವಿಷ್ಯದಲ್ಲಿ ಕಚ್ಚಾ ವಸ್ತುಗಳ ಆಮದು ಕೊರತೆ ತೀವ್ರಗೊಳ್ಳುವುದರಿಂದ ರೋಗಿಗಳು ಸಹ ತೊಂದರೆ ಎದುರಿಸುವಲ್ಲಿ ಯಾವುದೇ ಅನುಮಾನವಿಲ್ಲ. ಕೂಡಲೇ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ KPRDO ಅಧ್ಯಕ್ಷ ಸಿ.ಜಯರಾಮ್ ಮತ್ತು ಸದಸ್ಯ ಮಹೇಶ್ ಮನವಿ ಮಾಡಿದ್ದಾರೆ.
MUST WATCH : LADY PSI ಮೇಲೆ ಹಲ್ಲೆಗೆ ಯತ್ನ – FIR ಆಗಿದ್ರೂ ಆರೋಪಿಗಳ ಬಂಧನವಿಲ್ಲ




