Vijayapura : ವಿಜಯಪುರ ಜಿಲ್ಲೆಯ ಸಿಂದಗಿ ಬೈಪಾಸ್ ಬಳಿ ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರ ಕಾರಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ಬೈಪಾಸ್ ಬಳಿ ಇಂದು ಅಪಘಾತ ಸಂಭವಿಸಿದ್ದು, ಸಿಂದಗಿ ಶಾಸಕ ಅಶೋಕ್ ಮನಗೂಳಿ ಅವರ ಕಾರಿಗೆ ಇನ್ನೊಂದು ವಾಹನ ಡಿಕ್ಕಿಹೊಡೆದಿದೆ. ಇನ್ನು ಅಪಘಾತ ಸಂಭವಿಸಿದ ವೇಳೆ ಶಾಸಕರ ಕಾರಿನಲ್ಲಿ ಅವರ ಪುತ್ರಿ ಹಾಗೂ ಸಹೋದರನ ಮಗ ಇದ್ದರು.
KA 03 NT 2827 ಸಂಖ್ಯೆಯ ವಿಧಾನಸೌಧ ಪಾಸ್ ಹೊಂದಿರುವ ಇನ್ನೋವಾ ಹೈಕ್ರಾಸ್ ಕಾರಿಗೆ, ವಿರುದ್ದ ದಿಕ್ಕಿನಿಂದ ಬಂದ ಸ್ವಿಫ್ಟ್ ಕಾರು ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದೆ.
ಇದನ್ನು ಓದಿ : ಮಗಳ ಫೇಸ್ ರಿವೀಲ್ ಮಾಡಿದ ದೀಪಿಕಾ ಪಡುಕೋಣೆ

ಇನ್ನು ಈ ಅಪಘಾತದಿಂದಾಗಿ ಕಾರುಗಳಿಗೆ ನಷ್ಟವಾಗಿದ್ದು, ಪ್ರಯಾಣಿಕರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರು ಕೂಡ ತಕ್ಷಣವೇ ಸಹಾಯಕ್ಕೆ ಧಾವಿಸಿದ್ದರು. ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಇದನ್ನು ನೋಡಿ : ಸಿಂದಗಿ ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ




