Bollywood : ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ತಮ್ಮ ಮುದ್ದು ಮಗಳು ದುವಾನನ್ನು ಕೊನೆಗೂ ಜಗತ್ತಿಗೆ ಪರಿಚಯಿಸಿದ್ದಾರೆ.

ಬಾಲಿವುಡ್ನ ಪ್ರಖ್ಯಾತ ತಾರಾ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ತಮ್ಮ ಮುದ್ದು ಮಗಳು ದುವಾನನ್ನು ಕೊನೆಗೂ ಜಗತ್ತಿಗೆ ಪರಿಚಯಿಸಿದ್ದಾರೆ. ದೀಪಾವಳಿಯ ವಿಶೇಷದಿನದಲ್ಲಿ ಮಾಡಿದ ಈ ಫೋಟೋ ರಿವೀಲ್ ಅಭಿಮಾನಿಗಳಲ್ಲಿ ಭಾರೀ ಖುಷಿಯ ಅಲೆ ಎಬ್ಬಿಸಿದೆ.
ಈ ಜೋಡಿಯ ಮಗಳು ದುವಾ ಜನಿಸಿ ಈಗಾಗಲೇ ಒಂದು ವರ್ಷ ಕಳೆದಿದೆ. ಆದರೆ ಈವರೆಗೆ ಮಗುವಿನ ಮುಖವನ್ನು ಯಾವ ಮಾಧ್ಯಮದಲ್ಲಿಯೂ ಬಹಿರಂಗಪಡಿಸದ ದಂಪತಿ, ಇದೀಗ ದೀಪಾವಳಿ ಹಬ್ಬದ ದಿನ ಮನೆಯ ಪೂಜಾ ಫೋಟೋವೊಂದರ ಮೂಲಕ ಮುದ್ದಾದ ದುವಾಳನ್ನು ಪಬ್ಲಿಕ್ಗೆ ಪರಿಚಯಿಸಿದ್ದಾರೆ.
ದೀಪಿಕಾ ಹಾಗೂ ದುವಾ ಇಬ್ಬರೂ ಕೆಂಪು ಬಣ್ಣದ ಸಲ್ವಾರ್ ನಲ್ಲಿ ಒಂದೇ ರೀತಿ ಮಿಂಚಿದ್ದಾರೆ. ರಣ್ವೀರ್ ಸಿಂಗ್ ಕೂಡ ಅವರೊಡನೆ ಕೈ ಜೋಡಿಸಿ, ಈ ಕುಟುಂಬದ ಖುಷಿಯ ಕ್ಷಣಗಳನ್ನು ಕ್ಯಾಂಡಿಡ್ ಫೋಟೋ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನು ನೋಡಿ : ಮುದ್ದು ಮಗಳ ಫೇಸ್ ರಿವೀಲ್ ಮಾಡಿದ ದೀಪಿಕಾ

ಈ ವಿಶೇಷ ಕ್ಷಣವನ್ನು ದೀಪಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದಕ್ಕೆ 7 ಮಿಲಿಯನ್ಗೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ಮಾತ್ರವಲ್ಲದೆ ಹಲವಾರು ಖ್ಯಾತ ನಟಿಯರೂ – ಸೋನಂ ಕಪೂರ್, ಬಿಪಾಶಾ ಬಸು, ಪೂಜಾ ಹೆಗಡೆ, ಶಿಲ್ಪಾ ಶೆಟ್ಟಿ, ದಿಯಾ ಮಿರ್ಜಾ, ನೇಹಾ ಧೂಪಿಯಾ ಮುಂತಾದವರು ಶುಭ ಹಾರೈಸಿದ್ದಾರೆ. ಕೊನೆಗೂ ದೀಪಿಕಾ ಮಗುವಿನ ಮುಖ ನೋಡಿದ್ದಕ್ಕೆ ಖುಷಿಯಾದ ಅಭಿಮಾನಿಗಳಿಂದ 7 ಮಿಲಿಯನ್ ಲೈಕ್ಸ್ ಬಂದಿದೆ.
ಅಮ್ಮನಾದ ನಂತರ ದೀಪಿಕಾ ತಮ್ಮ ಕಾಲವನ್ನು ಮಗುವಿನ ಆರೈಕೆಗೆ ಮೀಸಲಿಟ್ಟಿದ್ದು, ಸಿನಿಮಾ ಕೆಲಸದಲ್ಲಿ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮೆಟರ್ನಿಟಿ ಪೀರಿಯಡ್ ಮುಗಿಸಿ, Slowly but surely ಅಭಿನಯ ಲೋಕಕ್ಕೆ ಮರಳುತ್ತಿದ್ದಾರೆ.

ಇದನ್ನು ಓದಿ : ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಪಾಪಿ ಪತಿ




