Droupadi Murmu : ಶಬರಿಮಲೆ ದೇವಸ್ಥಾನಕ್ಕೆ ಭೇಟಿ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಚಕ್ರ ಲ್ಯಾಂಡಿಂಗ್ ವೇಳೆ ಹೂತು ಹೋದ ಘಟನೆ ನಡೆದಿದೆ.

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಚಕ್ರ ಲ್ಯಾಂಡಿಂಗ್ ವೇಳೆ ಹೂತು ಹೋದ ಘಟನೆ ನಡೆದಿದೆ. ಶಬರಿಮಲೆಗೆ ಭೇಟಿ ನೀಡುವ ಸಲುವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತೀಯ ವಾಯುಸೇನೆಯ ಎಂಐ -17 ಹೆಲಿಕಾಪ್ಟರ್ನಲ್ಲಿ ತಿರುವನಂತಪುರಂನಿಂದ ತೆರಳಿದ್ದರು. ಈ ವೇಳೆ ಹೆಲಿಕಾಪ್ಟರ್ ಹೊಸದಾಗಿ ಕಾಂಕ್ರೀಟ್ ಮಾಡಲಾಗಿದ್ದ ಲ್ಯಾಂಡಿಂಗ್ ಪ್ಯಾಡ್ ಮೇಲೆ ಇಳಿಯಿತು. ಬಳಿಕ ಹೆಲಿಕಾಪ್ಟರ್ನ ಒಂದು ಭಾಗ ಡಾಂಬರಿನಲ್ಲಿ ಸಿಲುಕಿಕೊಂಡಿತ್ತು.
ರಾಷ್ಟ್ರಪತಿಯ ಹೆಲಿಕಾಪ್ಟರ್ನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಪ್ಯಾಡ್ನ ಮೇಲ್ಮೈ ಭಾಗ ಕುಸಿದಿದ್ದು, ತಕ್ಷಣವೇ ಅಲ್ಲಿದ್ದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್ನ್ನು ವಿಮಾನವನ್ನು ಕುಸಿದ ಭಾಗದಿಂದ ಕೈನಿಂದ ತಳ್ಳಿದರು.ಅವರ ಸಮಯೋಚಿತ ಕಾರ್ಯಾಚರಣೆಯಿಂದಾಗಿ ರಾಷ್ಟ್ರಪತಿ ಮುರ್ಮು ಸೇರಿದಂತೆ ಅಲ್ಲಿದ್ದ ಯಾರಿಗೂ ಯಾವುದೇ ಅಪಾಯ ಸಂಭವಿಸಲಿಲ್ಲ.
ಇದನ್ನು ಓದಿ : ಇಂದು ಹಾಸನಾಂಬೆ ದರ್ಶನ ಮುಕ್ತಾಯ

ಮೂಲತಃ ಹೆಲಿಕಾಪ್ಟರ್ ಅನ್ನು ನೀಲಕ್ಕಲ್ನಲ್ಲಿ ಇಳಿಸಲು ಯೋಜಿಸಲಾಗಿದ್ದರೂ, ಹವಾಮಾನ ವೈಪರಿತ್ಯದಿಂದಾಗಿ ಪ್ರಮದಂಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಲ್ಯಾಂಡಿಂಗ್ ಪ್ಯಾಡ್ಗೆ ಹಾಕಲಾಗಿದ್ದ ಕಾಂಕ್ರೀಟ್ ಇನ್ನೂ ಸಂಪೂರ್ಣವಾಗಿ ಗಟ್ಟಿಯಾಗದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಘಟನೆ ಬಳಿಕ ರಾಷ್ಟ್ರಪತಿ ರಸ್ತೆ ಮಾರ್ಗವಾಗಿ ಪಂಪಾ ಕಡೆಗೆ ತೆರಳಿದರು. ಈ ವೇಳೆ, ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎಂಐ–17 ಹೆಲಿಕಾಪ್ಟರ್ನ ಚಕ್ರಗಳನ್ನು ಅಧಿಕಾರಿಗಳು ಕೈಯಿಂದ ತಳ್ಳುವ ದೃಶ್ಯ ಗಮನ ಸೆಳೆಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕೇರಳ ಪ್ರವಾಸ ಅಕ್ಟೋಬರ್ 21 ರಂದು ಆರಂಭಗೊಂಡಿದ್ದು, ಅಕ್ಟೋಬರ್ 24 ರಂದು ಮುಕ್ತಾಯಗೊಳ್ಳಲಿದೆ. ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಅವರ ಆಗಮನ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಸ್ವಾಗತಿಸಿದರು.

ಇದನ್ನು ನೋಡಿ : ಲ್ಯಾಂಡಿಂಗ್ ವೇಳೆ ಕುಸಿದ ಹೆಲಿಪ್ಯಾಡ್!




