Hasanamba : ಪ್ರಸಿದ್ಧ ಹಾಸನದ ಶ್ರೀ ಹಾಸನಾಂಬೆ ದೇವಿಯ ದರ್ಶನೋತ್ಸವ ಇಂದು ಅಂತಿಮ ಹಂತಕ್ಕೆ ತಲುಪಿದೆ.

ರಾಜ್ಯದ ಪ್ರಸಿದ್ಧ ಹಾಸನ ಶ್ರೀ ಹಾಸನಾಂಬೆ ದೇವಿಯ (Hasanamba Devi) ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದು (ಅಕ್ಟೋಬರ್ 22) ಕೊನೆ ದಿನವಾಗಿದೆ.
ಅಕ್ಟೋಬರ್ 10ರಿಂದ ಆರಂಭವಾದ ಹಾಸನಾಂಬೆ ದರ್ಶನದ ಅವಧಿಯಲ್ಲಿ ಅಕ್ಟೋಬರ್ 20ರವರೆಗೆ ಸರ್ವೋಚ್ಚ ದಾಖಲೆ ಸೃಷ್ಟಿಯಾಗಿ 24 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಇದು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲಾದ ಅತಿ ಹೆಚ್ಚು ಭಕ್ತರ ಸಂಖ್ಯೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಈ ಸಂಖ್ಯೆಯು 17.46 ಲಕ್ಷ ಆಗಿತ್ತು.
ಇದನ್ನು ನೋಡಿ : ಇಂದು ಹಾಸನಾಂಬೆ ದರ್ಶನ ಮುಕ್ತಾಯ, ದೇವಿ ಸನ್ನಿಧಿಯಲ್ಲಿ ಮಾಂಗಲ್ಯ ಸರದ ಪವಾಡ!

ಇಂದು (ಅಕ್ಟೋಬರ್ 22) ದರ್ಶನೋತ್ಸವದ ಕೊನೆಯ ದಿನವಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ದರ್ಶನಕ್ಕೆ ಭಕ್ತರು ದಂಡು ಹಾಸನದ ಬೀದಿಗಳಲ್ಲಿ ಹರಿದುಬರುತ್ತಿದ್ದಾರೆ. ಇನ್ನು ಹಾಸನಾಂನೆ ದೇವಿಯ ದರ್ಶನ ಸಂಜೆ 7 ಗಂಟೆವರೆಗೆ ಮಾತ್ರ ಲಭ್ಯವಿದ್ದು, ನಂತರ ಸಾರ್ವಜನಿಕರಿಗೆ ದರ್ಶನ ಅವಕಾಶವಿರುವುದಿಲ್ಲ.
ದರ್ಶನದ ಬಳಿಕ ಗುರುವಾರ (ನಾಳೆ) ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ಈ ಮೂಲಕ 2025ರ ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ ಬೀಳಲಿದೆ.

ಇದನ್ನು ಓದಿ : DJ ಹಳ್ಳಿ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ




