Bengaluru : ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಡಿಜೆ ಹಳ್ಳಿ ಇನ್ಸ್ಪೆಕ್ಟರ್ ವಿರುದ್ಧ ಕೇಳಿಬಂದಿದೆ

ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೊಬ್ಬರು ಗಂಭೀರ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಆರೋಪವನ್ನು ಹೊರಿಸಿರುವುದರಿಂದ ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.
ಡಿಜೆ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪ
ಬೆಂಗಳೂರಿನ ಡಿಜೆ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ರಿಜಿಸ್ಟರ್ ಸುನಿಲ್ ಅವರು ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿದ್ದು, 1 ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲದೇ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ನಮ್ಮ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ನ್ಯಾಯಕ್ಕಾಗಿ ಪೊಲೀಸ್ ಮಹಾನಿರ್ದೇಶಕರ ಮೊರೆ ಹೋಗಿದ್ದಾರೆ..
ಮನೆ, ಪಾರ್ಲರ್ ಆಮಿಷದಲ್ಲಿ ಅತ್ಯಾಚಾರ ಆರೋಪ
ಮಹಿಳೆಯ ಹೇಳಿಕೆಯಲ್ಲಿ, ಸುನೀಲ್ ಅವರು ಮನೆ ಕೊಡಿಸುವೆ, ಬ್ಯೂಟಿ ಪಾರ್ಲರ್ ತೆಗೆದುಕೊಡಿಸುತ್ತೇನೆ ಎಂಬ ಖಾತ್ರಿ ನೀಡಿ, ತಾನು ತಮ್ಮ ಮನೆ ಮತ್ತು ಹೋಟೆಲ್ಗೆ ಕರೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆಯ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಉಳಿಸಿಕೊಂಡು, ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವೆ ಎಂದು ಬೆದರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಬೆಳ್ಳಂಬೆಳಗ್ಗೆ ಮಳೆ – ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಚಿನ್ನು, ಮುದ್ದು ಚಾಟಿಂಗ್ ವೈರಲ್
ಇನ್ನು ಇಬ್ಬರ ನಡುವೆ ನಡೆದ ವಾಟ್ಸಾಪ್ ಚಾಟಿಂಗ್ಗಳು, ವಿಡಿಯೋ ಮತ್ತು ವಾಯ್ಸ್ ಕಾಲ್ಗಳ ಸಾಕ್ಷಿಗಳು ಬಹಿರಂಗವಾಗಿದ್ದು, “ಚಿನ್ನು”, “ಮುದ್ದು” ಎಂಬ ರೀತಿಯ ಅನ್ಯೋನ್ಯ ಮೆಸೇಜ್ಗಳು ಸ್ಪಷ್ಟವಾಗಿ ಸಿಕ್ಕಿವೆ. ಈ ಸಂದರ್ಭ ಇನ್ಸ್ಪೆಕ್ಟರ್ ಸುನೀಲ್ಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಬೆಳೆಯುತ್ತಿದೆ.
ಇನ್ನುಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಾಗಿದೆ. ಸದ್ಯ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗುತ್ತಿದ್ದು, ಮುಂದೆ ಇದು ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನು ನೋಡಿ : ಡಿಜೆ ಹಳ್ಳಿ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಚಿನ್ನು, ಮುದ್ದು ಚಾಟಿಂಗ್ ವೈರಲ್




