
TUMAKURU NEWS : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಲಕ್ಷ್ಯದಿಂದ ತುಮಕೂರು ಜಿಲ್ಲೆಯ ಅದೆಷ್ಟೋ ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆ ತಲುಪುತ್ತಿದ್ದು, ಅಂಗನವಾಡಿ ಮಕ್ಕಳು ಜೀವದ ಜೊತೆ ಇಲಾಖೆ ಚೆಲ್ಲಾಟ ಆಡ್ತಾ ಇದೆ. ಅಂಗನವಾಡಿ ಕೇಂದ್ರಗಳ ದುಸ್ಥಿತಿ ಬಗ್ಗೆ ಪ್ರಜಾಶಕ್ತಿ ಟಿವಿ ಅಭಿಯಾನದ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡ್ತಾ ಇದೆ.. ಇಂದು ಪ್ರಜಾಶಕ್ತಿ ಟಿವಿ ತುಮಕೂ ರು ತಾಲೂಕಿನ ಗೂಳೂರು ಹೋಬಳಿಯ ದೊಡ್ಡ ಲಿಂಗಾಯನ ಪಾಳ್ಯ ಹಾಗೂ ಕಲ್ಲಯ್ಯನ ಪಾಳ್ಯ ಮಧ್ಯದ ಭಾಗದಲ್ಲಿರುವ ಅಂಗನವಾಡಿ ಕೇಂದ್ರದ ದುಸ್ಥಿತಿ ಮೇಲೆ ಬೆಳಕು ಚೆಲ್ಲಿದೆ.
ದೊಡ್ಡ ಲಿಂಗಯ್ಯನ ಪಾಳ್ಯ ಹಾಗೂ ಕಲ್ಲಯ್ಯನ ಪಾಳ್ಯ ಗ್ರಾಮಗಳ ಮಧ್ಯಭಾಗದಲ್ಲಿ ನಿರ್ಮಾಣಗೊಂಡಿ ರೋ ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆ ತಲುಪಿದ್ದು, ಮೂಲಭೂತ ಸೌಕರ್ಯ ಇಲ್ಲದೇ ಸೊರಗುತ್ತಿದೆ. ಅಂಗನವಾಡಿ ಕೇಂದ್ರ ಹಳೆಯದಾಗಿದ್ದು, ಗೋಡೆಗಳು ಹಾಗೂ ಮೇಲ್ಛಾವಣಿಗಳು ಬಿರುಕು ಬಿಟ್ಟಿವೆ. ಇದ್ರಿಂದ ಮಳೆ ಬಂತೆಂದ್ರೆ ಸೋರುವ ಛಾವಣಿಯಲ್ಲೇ ಕುಳಿತು, ಮಳೆಯ ನೀರಲ್ಲೇ ಪಾಠ ಕಲಿಯುವ ಸ್ಥಿತಿ ಇದೆ.ಇನ್ನು ಅಂಗನವಾಡಿ ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿದ್ದು ಆಗಲೋ, ಈಗಲೋ ಅಂಗನವಾಡಿ ಕೇಂದ್ರ ಬೀಳುವ ಸ್ಥಿತಿ ಇದ್ದು ಮಕ್ಕಳ ಜೀವಕ್ಕೆ ಗ್ಯಾರಂಟಿಯೇ ಇಲ್ಲವಾಗಿದೆ.
ಇನ್ನು ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆ ತಲುಪಿ ಸುಮಾರು ತಿಂಗಳುಗಳೇ ಕಳೆದಿದ್ರು ಕೂಡ ಈವರೆಗೂ ಯಾವೊಬ್ಬ ಅಧಿಕಾರಿಯೂ ದುರಸ್ಥಿ ಮಾಡಲು ಮುಂದಾಗುತ್ತಿಲ್ಲ.. ಇದ್ರಿಂದ ನಮ್ಮ ಮಕ್ಕಳನ್ನು ಅಂಗನ ವಾಡಿ ಕೇಂದ್ರಕ್ಕೆ ಕಳುಹಿಸಲು ಭಯ ಆಗ್ತಾ ಇದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ರು.




