
WCPL 2025 : 2025ರ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ (Massy Women’s Caribbean Premier League) ಫೈನಲ್ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ (Barbados Royals) ತಂಡವು ಗಯಾನಾ ಅಮೆ ಜಾನ್ ವಾರಿಯರ್ಸ್ (Guyana Amazon Warriors) ತಂಡವನ್ನು 3 ವಿಕೆಟ್ಗಳಿಂದ ಸೋಲಿಸಿ ಹ್ಯಾಟ್ರಿಕ್ ಕಪ್ ಗೆ ಮುತ್ತಿಕ್ಕಿದೆ. ಇದು ಈ ತಂಡಕ್ಕೆ ತೃತೀಯ ಸತತ ಪ್ರಶಸ್ತಿ. ಇದಕ್ಕಿಂತ ವಿಶೇಷವೆಂದರೆ, ಈ ಚಾಂಪಿಯನ್ ತಂಡದಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ಇದ್ದರು̤
ಮೊದಲು ಬ್ಯಾಟಿಂಗ್ ಮಾಡಿದ ವಾರಿಯರ್ಸ್ ತಂಡವು 136/3 ರನ್ ಗಳಿಸಿತು. ಓಪನರ್ ಆಮಿ ಹಂಟರ್ 36 ಎಸೆತಗಳಲ್ಲಿ 29 ರನ್ ಗಳಿಸಿದರು. ಉಳಿದ ಅಗ್ರ ಕ್ರಮಾಂಕದ ಆಟಗಾರ್ತಿಯರು ಸಪೋರ್ಟ್ ನೀಡಿದರೂ, ದೊಡ್ಡ ಮೊತ್ತವನ್ನು ಸಾಧಿಸಲು ಸಾಧ್ಯವಾಗಲಿಲ್ಲ.
ಇನ್ನು ರಾಯಲ್ಸ್ ತಂಡದ ರನ್ ಚೇಸ್ ರೋಚಕವಾಗಿದ್ದು, ಆರಂಭಿಕ ಪವರ್-ಪ್ಲೇನಲ್ಲಿ ಎರಡು ವಿಕೆಟ್ಗಳು ಬಿದ್ದರೂ, ಕೈಸಿಯಾ ನೈಟ್ ಮತ್ತು ಕೋರ್ಟ್ನಿ ನಡುವಿನ ಉತ್ತಮ ಜೋಡಣೆಯ ಆಟದ ಬಲದಿಂದ ಗೆಲುವಿನ ದಿಕ್ಕಿನಲ್ಲಿ ಸಾಗಿದರು.
ಟೂರ್ನಮೆಂಟ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಚಾಮರಿ ಅಥಪತ್ತು, ಏಳು ವಿಕೆಟ್ಗಳೊಂದಿಗೆ ಹಾಗೂ ಅತಿಹೆಚ್ಚು ರನ್ಗಳೊಂದಿಗೆ ಪ್ಲೇಯರ್ ಆಫ್ ದ ಸೀಸನ್ ಗೌರವಕ್ಕೆ ಭಾಜನರಾದರು. ತಲಾ ಎಂಟು ವಿಕೆಟ್ಗಳನ್ನು ಕಬಳಿಸಿದ ವಾರಿಯರ್ಸ್ನ ಅಶ್ಮಿನಿ ಮುನಿಸರ್ಮತ್ತು ಲಾರಾ ಹ್ಯಾರಿಸ್, ಉತ್ತಮ ಬೌಲರ್ ಗಳಾಗಿ ಹೊರಹೊಮ್ಮಿದರು.





