Self Harming: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ.

Bengaluru Crime: ಆನೇಕಲ್ನಲ್ಲಿ ದಾರುಣ ಘಟನೆ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು ಗ್ರಾಮದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಇಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದ ಯುವ ಜೋಡಿಯೊಂದು ಆತ್ಮಹತ್ಯೆಗೆ (Self Harming) ಶರಣಾಗಿದೆ.
ಮೃತರನ್ನು ಸೀಮಾ ನಾಯಕ್ (25) ಮತ್ತು ರಾಕೇಶ್ (23) ಎಂದು ಗುರುತಿಸಲಾಗಿದೆ. ಇವರು ಇಬ್ಬರೂ ಒಡಿಶಾ ಮೂಲದವರು.
ಬಾಗಿಲು ತೆರೆಯದ ಹಿನ್ನೆಲೆ ಶಂಕೆ
ಎರಡು ದಿನಗಳಿಂದ ಇವರ ಮನೆಯಿಂದ ಯಾವುದೇ ಚಲನವಲನ ಕಾಣದ ಹಿನ್ನೆಲೆಯಲ್ಲಿ ನೆರೆಹೊರೆಯವರು ಅನುಮಾನಪಟ್ಟರು. ಬಾಗಿಲು ತೆರೆಯದ ಕಾರಣ ಕಿಟಕಿ ಗಾಜು ಒಡೆದು ನೋಡಿದಾಗ ಇಬ್ಬರೂ ನೇಣು ಬಿಗಿದಿರುವುದು ಬೆಳಕಿಗೆ ಬಂತು. ಕೂಡಲೇ ಸ್ಥಳೀಯರು ಜಿಗಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ : Women ODI World Cup 2025: ಸ್ಮೃತಿ ಮಂಧಾನ ಔಟಾದ ಬಳಿಕ ಪಂದ್ಯ ಕೈಚೆಲ್ಲಿದ ಭಾರತ..!
ಜಗಳವೇ ಕಾರಣ?
ಮಾಹಿತಿಯ ಪ್ರಕಾರ, ರಾಕೇಶ್ ಪದೇಪದೆ ಮದ್ಯಪಾನ ಮಾಡಿ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಭಾನುವಾರವೂ ಇಬ್ಬರ ಮಧ್ಯೆ ಜಗಳ ನಡೆದಿತ್ತು.
ಅದಾದ ನಂತರ ಸೋಮವಾರ ಬೆಳಗ್ಗೆ ರಾಕೇಶ್ ನೇಣು ಬಿಗಿದುಕೊಂಡಿದ್ದ, ನಂತರ ಸೀಮಾ ನಾಯಕ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಪೊಲೀಸರು ಸ್ಥಳಕ್ಕೆ ಧಾವನೆ
ಘಟನೆಯ ಮಾಹಿತಿ ಪಡೆದ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶವಗಳನ್ನು ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
MUST WATCH: ಪೊಲೀಸ್ ಹುತಾತ್ಮ ದಿನಾಚರಣೆ ನೂರಾರು ಮಂದಿ ಪೊಲೀಸರಿಂದ ಗೌರವ ಅರ್ಪಣೆ | Police Tribute in Tumakuru




