Chikkaballapura : ಆತ ಬದುಕನ್ನು ಕಟ್ಟಿಕೊಂಡು ರಾಜ್ಯಬಿಟ್ಟು ಮತ್ತೊಂದ ರಾಜ್ಯಕ್ಕೆ ಬಂದಿದ್ದ, ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ.

ಆತ ಬದುಕನ್ನು ಕಟ್ಟಿಕೊಂಡು ರಾಜ್ಯಬಿಟ್ಟು ಮತ್ತೊಂದ ರಾಜ್ಯಕ್ಕೆ ಬಂದಿದ್ದ, ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ. ಆದ್ರೆ ಹೋಟೆಲ್ ನಲ್ಲಿ ದಸರಾ, ದೀಪಾವಳಿ ಹಬ್ಬ ಮಾಡಲು ಮಾವಿನ ತೋರಣ ಕಟ್ಟಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ದಸರಾ ಹಬ್ಬ, ದೀಪಾವಳಿ ಅಂತಾ ಕೆಲಸ ಮಾಡುತ್ತಿದ್ದ ಹೋಟೆಲ್ ಒಂದಕ್ಕೆ ತೋರಣವನ್ನು ಕಟ್ಟಲು ಮೇಲೆ ಹೋಗಿದ್ದಾನೆ..ಆದರೆ ವಿಧಿಯಾಟ ಎಲ್ಲಿಗೆ ಮುಗಿಯುತ್ತೋ ಗೋತ್ತೆ ಅಗಲ್ಲಾ…ಅದರಂತೆ ತನಗೆ ಅರಿವಿಲ್ಲದಂತೆಯೇ ವಿದ್ಯುತ್ ತಂತಿ ಹಿಡಿದು ಮಸಣದ ಹಾದಿ ಹಿಡಿದಿದ್ದಾನೆ. ಇಷ್ಟಕ್ಕೂ ವಿಧಿಯಾಟಕ್ಕೆ ಬಲಿಯಾಗಿರುವ ವ್ಯಕ್ತಿಯ ಹೆಸರು ನೇಪಾಳ ಮೂಲದ ಪದಮ್ ಬೀಷ್ಟ್ ಅಂತಾ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡಿಕೊಂಡಿ ಜೀವನ ಸಾಗಿಸುತ್ತಿದ್ದ.
ಇದನ್ನು ನೋಡಿ : ಗುಬ್ಬಿಯಲ್ಲಿ1.40 ಲಕ್ಷದ ಅಭಿವೃದ್ಧಿ ಕಾಮಗಾರಿ – ಶಾಸಕ SR SRINIVAS ಗುದ್ದಲಿ ಪೂಜೆ

ಕಳೆದ ಮೂರು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಿಕೆ ಡಾಬಾ ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಜೀವನವನ್ನು ಸಾಗಿಸುತ್ತಿದ್ದ. ಆದರೆ, ಡಾಬಾದಲ್ಲಿ ಪೂಜೆ ಹಮ್ಮಿಕೊಂಡಿದ್ದು ಬೆಳಗ್ಗೆ ಯಿಂದಲೂ ಸ್ವಚ್ಚತೆ ಮಾಡಿ ಸಿಂಗಾರ ಮಾಡಿದ್ದ. ನಂತರ ಗೇಟ್ ಸಮೀಪ ಮಾವಿನ ತೋರಣ ಕಟ್ಟುತ್ತಿದ್ದ ವೇಳೆ ಏಕಾಏಕಿ ಬೀಡಾ ಅಂಗಡಿಯ ಮೇಲೆ ಹತ್ತಿ ತನಗೆ ಅರಿವಿಲ್ಲದೆಯೇ ವಿದ್ಯುತ್ ತಂತಿ ಹಿಡಿದು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಇನ್ನೂ ಪದಮ್ ಬೀಷ್ಟ್ ವಿದ್ಯುತ್ ತಂತಿ ಹಿಡಿದು ಕೆಳಗೆ ಬೀಳುತ್ತಿದಂತೆ ಕೆಳಗೆ ಇದ್ದ ಡಾಬಾ ಮಾಲೀಕ ಹಾಗೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಒಟ್ಟಾರೇ ಬದುಕು ಕಟ್ಟಿಕೊಂಡು ಚಿಕ್ಕಬಳ್ಳಾಪುರಕ್ಕೆ ಬಂದಿದವ ಜೀವನ ಧಾರುಣ ಅಂತ್ಯಗೊಂಡಿರುವುದು ವಿಪರ್ಯಾಸವಾಗಿದೆ.

ಇದನ್ನು ಓದಿ : ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ನಲ್ಲಿ ರಿಷಬ್ ಶೆಟ್ಟಿ




