Belgaum Crime :ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಪತ್ನಿ ಮೇಲಿನ ಸಂಶಯದಿಂದ ಪೊಲೀಸ್ ಪೇದೆ ತಾನೇ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಮೃತೆಯಾದವರು ಬಸ್ ಕಂಡಕ್ಟರ್ ಕಾಶಮ್ಮ ನೆಲ್ಲಿಗಣಿ (34), ಆರೋಪಿ ಪತಿ ಪಿಸಿ ಸಂತೋಷ್ ಕಾಂಬಳೆ ಪರಾರಿಯಾಗಿದ್ದಾರೆ

ಸುಮಾರು 13 ವರ್ಷಗಳ ಹಿಂದೆ ಸಂತೋಷ್ ಮತ್ತು ಕಾಶಮ್ಮ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯ ನಂತರ ಸಂತೋಷ್ ಹೆಂಡತಿಯ ಮೇಲಿನ ಅತಿಯಾದ ಸಂಶಯ ಮತ್ತು ಕಿರುಕುಳದಿಂದ ಕುಟುಂಬದಲ್ಲಿ ಗಲಾಟೆ ಆರಂಭವಾಗಿತ್ತು.
ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ಬೇಸತ್ತ ಕಾಶಮ್ಮ ತವರು ಮನೆ ಸೇರಿ ನಂತರ ಸವದತ್ತಿ ಡಿಪೋಗೆ ವರ್ಗಾವಣೆಯಾಗಿದ್ದರು. ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
Belgaum Crime : ವಿಚ್ಛೇದನದ ಬಳಿಕವೂ ಕಿರುಕುಳ
ನಿರಂತರ ಕಲಹದಿಂದ ಬೇಸತ್ತ ಕಾಶಮ್ಮ ಅವರು ಬೈಲಹೊಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 5, 2025 ರಂದು ಅಧಿಕೃತವಾಗಿ ವಿಚ್ಛೇದನವೂ ದೊರಕಿತ್ತು.
ಆದರೆ ವಿಚ್ಛೇದನದ ಬಳಿಕವೂ ಸಂತೋಷ್ ಪತ್ನಿಯನ್ನು ಫೋನ್ ಕರೆಗಳಿಂದ ಕಿರುಕುಳ ನೀಡುತ್ತಲೇ ಇದ್ದನೆಂದು ಕುಟುಂಬದವರು ತಿಳಿಸಿದ್ದಾರೆ. ಈ ಕಾರಣದಿಂದ ಇಬ್ಬರ ಮಧ್ಯೆ ವೈಷಮ್ಯ ಇನ್ನಷ್ಟು ಹೆಚ್ಚಾಗಿತ್ತು.
MUST WATCH : ARVIND SCHOOL | ಪ್ರತಿಷ್ಠಿತ ಶಾಲೆಯಲ್ಲಿ ಘೋರ ದುರಂತ- ಮಕ್ಕಳ ಪ್ರಾಣ ಏನಾದ್ರು ಆಗ್ಲಿ, ದುಡ್ಡು ಮಾತ್ರ ಬೇಕು?
ಅಕ್ಟೋಬರ್ 13ರ ರಾತ್ರಿ ಕ್ರೂರ ಹತ್ಯೆ
ಅಕ್ಟೋಬರ್ 13ರ ರಾತ್ರಿ ಸುಮಾರು 8 ಗಂಟೆ ವೇಳೆಗೆ, ಸಂತೋಷ್ ಕಾಶಮ್ಮನ ಮನೆಗೆ ತೆರಳಿ ವಾಗ್ವಾದ ನಡೆಸಿದ್ದಾನೆ. ಕೋಪದ ರಭಸದಲ್ಲಿ ಕತ್ತು ಕೊಯ್ದು, ನಂತರ ಹೊಟ್ಟೆಗೆ ಮೂರು ಬಾರಿ ಇರಿದು ಕ್ರೂರವಾಗಿ ಹತ್ಯೆಗೈದಿದ್ದಾನೆ.
ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಮೂರು ದಿನಗಳ ನಂತರ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಶೋಧ ಆರಂಭಿಸಿದ್ದಾರೆ
ಮಾಹಿತಿ ಪಡೆದ ಸವದತ್ತಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ಕಾಂಬಳೆ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನೆಯು ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಪತ್ನಿಯ ಮೇಲಿನ ಸಂಶಯದಿಂದ ಹತ್ಯೆಗೈದ ಪೊಲೀಸ್ ಪೇದೆ ವಿರುದ್ಧ ಕಠಿಣ ಕ್ರಮದ ಆಗ್ರಹ ವ್ಯಕ್ತವಾಗಿದೆ.
MUST WATCH : ILLEGAL TRANSPORT |PERMIT ಇಲ್ಲದ ಲಾರಿಯಲ್ಲಿ ಪಡಿತರ ಅಕ್ಕಿ ಸಾಗಾಟ- ದಂಧೆಕೋರರಿಗೆ ಚಳಿ ಬಿಡಿಸಿದ PRAJASHAKTHI TV




