Karnataka : ಕರ್ನಾಟಕದಲ್ಲಿ ಮದ್ಯದ ಬೆಲೆ ಏರಿಕೆಯ ಪರಿಣಾಮವಾಗಿ ಮದ್ಯ ಹಾಗೂ ಬಿಯರ್ ಮಾರಾಟದಲ್ಲಿ ಭಾರೀ ಇಳಿಕೆ. ಅಬಕಾರಿ ಸುಂಕದಿಂದ ಸರ್ಕಾರದ ಆದಾಯ ಹೆಚ್ಚಳವಾದರೂ ವ್ಯಾಪಾರ ಕುಸಿತ ಗಂಭೀರ ಚಿಂತನೆಗೆ ಕಾರಣವಾಗಿದೆ.

Karnatakaದಲ್ಲಿ ಮದ್ಯ ಮಾರಾಟ ಭಾರಿ ಕುಸಿತ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ಬೆಲೆ ಪದೇಪದೇ ಏರಿಕೆಯಾದ ಪರಿಣಾಮ, ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಕಳೆದ ಆರು ತಿಂಗಳಲ್ಲಿ ಐಎಂಎಲ್ (IML) ಮತ್ತು ಬಿಯರ್ ಮಾರಾಟ ಎರಡೂ ಗಣನೀಯವಾಗಿ ಇಳಿಕೆ ಕಂಡಿವೆ.
ಮದ್ಯದ ಬೆಲೆ ಏರಿಕೆಯ ಪರಿಣಾಮ
ಮೂರ್ನಾಲ್ಕು ಬಾರಿ ಬೆಲೆ ಏರಿಕೆಯಾದ ನಂತರ ಗ್ರಾಹಕರು ಖರ್ಚು ಕಡಿಮೆ ಮಾಡಲು ಆರಂಭಿಸಿದ್ದು, ಮಾರಾಟದ ಮೇಲೆ ನೇರ ಹೊಡೆತ ಬಿದ್ದಿದೆ.ಅಬಕಾರಿ ಇಲಾಖೆಯ ಅರ್ಧವಾರ್ಷಿಕ ಡೇಟಾ ಪ್ರಕಾರ, 2023–2025ರ ನಡುವೆ ಮದ್ಯ ಮಾರಾಟ ನಿರಂತರ ಇಳಿಕೆ ಕಂಡಿದೆ.
- 2023 (ಏಪ್ರಿಲ್–ಸೆಪ್ಟೆಂಬರ್): 352.83 ಲಕ್ಷ ಬಾಕ್ಸ್ ಮಾರಾಟ
- 2024: 345.76 ಲಕ್ಷ ಬಾಕ್ಸ್
- 2025: ಕೇವಲ 342.93 ಲಕ್ಷ ಬಾಕ್ಸ್
ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ 2.83 ಲಕ್ಷ ಬಾಕ್ಸ್ ಇಳಿಕೆ ದಾಖಲಾಗಿದೆ.

MUST READ : Bangalore Harassment :KSRTC ಬಸ್ನಲ್ಲಿ ವೈದ್ಯೆಗೆ ಲೈಂಗಿಕ ಕಿರುಕುಳ
ಬಿಯರ್ ಮಾರಾಟದಲ್ಲೂ ಕುಸಿತ
ಬಿಯರ್ ಮಾರಾಟದಲ್ಲೂ ಇದೇ ಪ್ರವೃತ್ತಿ ಮುಂದುವರಿದಿದೆ.
- 2024ರಲ್ಲಿ: 242.73 ಲಕ್ಷ ಬಾಕ್ಸ್
- 2025ರಲ್ಲಿ: 195.27 ಲಕ್ಷ ಬಾಕ್ಸ್
ಇದರಿಂದ 47.46 ಲಕ್ಷ ಬಾಕ್ಸ್, ಅಂದರೆ ಶೇ 19.55% ಇಳಿಕೆ ಕಂಡುಬಂದಿದೆ.ಬಿಯರ್ ಪ್ರಿಯರು “ಬೆಲೆ ಏರಿಕೆಯಿಂದ ನಾವು ಹಿಂದೆ 3 ಬಿಯರ್ ಕುಡಿಯುತ್ತಿದ್ದರೆ, ಈಗ ಒಂದೇ ಬಿಯರ್ ಕುಡಿಯಲುರಾಗಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಆದಾಯ ಹೆಚ್ಚಳ, ವ್ಯಾಪಾರಿಗಳಿಗೆ ನಷ್ಟ
ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಹಕರು ಹಿಂದೆ ಸರಿದರೂ, ಅಬಕಾರಿ ಸುಂಕದಿಂದ ಸರ್ಕಾರದ ಖಜಾನೆ ತುಂಬುತ್ತಿದೆ.ಆದರೆ ವ್ಯಾಪಾರಿಗಳು “ಶೇ 15 ರಿಂದ 20 ರಷ್ಟು ವ್ಯಾಪಾರ ಇಳಿಕೆಯಾಗಿದೆ” ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ, ಬೆಲೆ ಏರಿಕೆ ಸರ್ಕಾರದ ಆದಾಯವನ್ನು ಹೆಚ್ಚಿಸಿದರೂ, ಮದ್ಯ ಮತ್ತು ಬಿಯರ್ ಮಾರಾಟಗಾರರ ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.ಗ್ರಾಹಕರ ಖರೀದಿ ಶಕ್ತಿ ಕುಗ್ಗಿದ್ದು, ಮದ್ಯ ಉದ್ಯಮದಲ್ಲಿ ಮಂದಗತಿ ಸೃಷ್ಟಿಯಾಗಿದೆ.
MUST WATCH : ವಿಜಯ್ ಕಾರ್ಯಕ್ರಮದಲ್ಲಿ ಕಾಲ್ತುಳಿತ ತನಿಖೆ ಮಾಡ್ತಿರೋ ವ್ಯಕ್ತಿ ಯಾರು ಗೊತ್ತಾ?




