Kantara 1 : ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದಲ್ಲಿ ಬಿಡುಗಡೆಯಾದ ‘ಕಾಂತಾರ-1’ ಸಿನಿಮಾ ಕೇವಲ 11 ದಿನಗಳಲ್ಲಿ ಬರೋಬ್ಬರಿ ₹655 ಕೋಟಿ ರೂಪಾಯಿ ಗಳಿಕೆಯನ್ನು ದಾಖಲಿಸಿದೆ.

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದಲ್ಲಿ ಬಿಡುಗಡೆಯಾದ ‘ಕಾಂತಾರ-1’ (Kantara Chapter 1) ಸಿನಿಮಾ ಕೇವಲ 11 ದಿನಗಳಲ್ಲಿ ಬರೋಬ್ಬರಿ ₹655 ಕೋಟಿ ರೂಪಾಯಿ ಗಳಿಕೆಯನ್ನು ದಾಖಲಿಸಿದ್ದು, ಭಾರತೀಯ ಸಿನಿಮಾರಂಗದಲ್ಲಿ ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಕನ್ನಡ ಚಿತ್ರರಂಗದ ಹೆಮ್ಮೆ ಎಂದು ಕರೆಸಿಕೊಂಡಿರುವ ಈ ಚಿತ್ರವು ದೇಶದ ಗಡಿಗಳನ್ನು ದಾಟಿ, ವಿಶ್ವದಾದ್ಯಂತ ಪ್ರೇಕ್ಷಕರ ಮನಸ್ಸು ಗೆದ್ದಿದೆ.
ಇದನ್ನು ನೋಡಿ : ಪಾಲಿಕೆ ಅಧಿಕಾರಿಗಳೇ ಈ ಸ್ಟೋರಿ ನೋಡಿ

ಇನ್ನು ಸಿನಿಮಾ ಬಿಡುಗಡೆ ಆಗಿ ಇಷ್ಟು ದಿನವಾದರೂ, ಕಾಂತಾರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಜನರು ಮುಗಿಬಿದ್ದು ಚಿತ್ರಮಂದಿರಗಳತ್ತ ಹರಿದಿದ್ದಾರೆ. ಕೆಲವು ಥಿಯೇಟರ್ಗಳಲ್ಲಿ ಟಿಕೆಟ್ ಗಳಿಗೆ ಬಂಪರ್ ಡಿಮಾಂಡ್ ಕಾಣಿಸುತ್ತಿದ್ದು, ಹೌಸ್ಫುಲ್ ಪ್ರದರ್ಶನಗಳು ಮುಂದುವರೆದಿವೆ.

ಕುಟುಂಬ ಸಮೇತ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಥಿಯೇಟರ್ಗಳಿಗೆ ತೆರಳುತ್ತಿರುವುದು, ಈ ಚಿತ್ರವನ್ನು “ಪೈಸಾ ವಸೂಲ್ ಸಿನಿಮಾ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ಹಾಡಿ ಹೊಗಳುತ್ತಿದ್ದಾರೆ.
ಇದನ್ನು ಓದಿ : ಕರೂರು ಕಾಲ್ತುಳಿತ ಘಟನೆ – ತನಿಖೆ ಮಾಡ್ತಿರೋ ವ್ಯಕ್ತಿ ಯಾರು ಗೊತ್ತಾ?




