Bangalor : ಜ್ವರದಿಂದ ಚೇತರಿಸಿಕೊಂಡ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದು ದೇವರ ಸ್ತೋತ್ರ ಪುಸ್ತಕ ಓದಿದರು. ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

Bangalor : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ದೇವರ ಸ್ತೋತ್ರ ಪುಸ್ತಕ ಓದಿದ ದೇವೇಗೌಡ್ರು
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ್ರು (HD Devegowda) ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಜ್ವರ ಮತ್ತು ಮೂತ್ರದ ಸೋಂಕಿನ ಕಾರಣದಿಂದ ಅವರು ಕೆಲವು ದಿನಗಳಿಂದ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು (ಅಕ್ಟೋಬರ್ 13) ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ಪದ್ಮನಾಭನಗರ ನಿವಾಸಕ್ಕೆ ವಾಪಸಾಗಿದ್ದಾರೆ.
MUST READ : Karnataka: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ
ಚೇತರಿಸಿಕೊಂಡ ತಕ್ಷಣ ಪುಸ್ತಕ ಓದಿದ ದೇವೇಗೌಡ್ರು
ಆಸ್ಪತ್ರೆಯಿಂದ ಮನೆಗೆ ಬಂದ ಕೂಡಲೇ ದೇವೇಗೌಡ್ರು ದೇವರ ಸ್ತೋತ್ರಗಳ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದಿದ ಕ್ಷಣದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.94ರ ವಯಸ್ಸಿನಲ್ಲೂ ಪುಸ್ತಕ ಓದುವ ಅಭ್ಯಾಸವನ್ನು ಮುಂದುವರಿಸಿರುವುದು ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.ನೆಟ್ಟಿಗರು “ಇಷ್ಟು ವಯಸ್ಸಿನಲ್ಲೂ ದೇವರ ಸ್ತೋತ್ರ ಓದುವ ಶಕ್ತಿ, ಶ್ರದ್ಧೆ ಅಸಾಧಾರಣ!” ಎಂದು ಕೊಂಡಾಡಿದ್ದಾರೆ.
ದೇವೇಗೌಡ್ರು ಪ್ರತಿದಿನ ಬೆಳಿಗ್ಗೆ ದೇವರ ಸ್ತೋತ್ರಗಳು ಹಾಗೂ ಆಂಜನೇಯ್ಯ ಸ್ತುತಿಗಳ ಪುಸ್ತಕ ಓದುವ ಅಭ್ಯಾಸ ಹೊಂದಿದ್ದಾರೆ.
ಆದರೆ ಅನಾರೋಗ್ಯದ ಕಾರಣದಿಂದ ಕಳೆದ ಕೆಲವು ದಿನ ಓದಲು ಸಾಧ್ಯವಾಗಿರಲಿಲ್ಲ.
ಈಗ ಚೇತರಿಸಿಕೊಂಡ ತಕ್ಷಣ ಅವರು ಮತ್ತೆ ತಮ್ಮ ದೈನಂದಿನ ಪಠನ ಕ್ರಮವನ್ನು ಪುನರಾರಂಭಿಸಿದ್ದಾರೆ.
ದೇವೇಗೌಡ್ರು ಕೃತಜ್ಞತೆ ವ್ಯಕ್ತಪಡಿಸಿದ ಟ್ವೀಟ್
ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ದೇವೇಗೌಡ್ರು ಹಂಚಿಕೊಂಡ ಫೋಟೋಗೆ “ದೇವರ ದಯೆಯಿಂದ ಆರೋಗ್ಯ ಸ್ಥಿರವಾಗಿದೆ. ಮಣಿಪಾಲ್ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದಗಳು. ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಬೇಗನೆ ಸಾರ್ವಜನಿಕ ಕರ್ತವ್ಯಗಳನ್ನು ಪುನರಾರಂಭಿಸುತ್ತೇನೆ” ಎಂದು ಬರೆದಿದ್ದಾರೆ.
ವೈದ್ಯರು ದೇವೇಗೌಡ್ರಿಗೆ ಹದಿನೈದು ದಿನಗಳ ವಿಶ್ರಾಂತಿ ಸೂಚಿಸಿದ್ದು, ಈ ಅವಧಿಯಲ್ಲಿ ಯಾರೂ ಮನೆಗೆ ಭೇಟಿ ನೀಡಬಾರದು ಎಂದು ಜೆಡಿಎಸ್ ಮುಖಂಡರು ಮನವಿ ಮಾಡಿದ್ದಾರೆ.
ದೇವೇಗೌಡ್ರು ಆಸ್ಪತ್ರೆಗೆ ದಾಖಲಾಗಿದ್ದಾಗ ರಾಜ್ಯದಾದ್ಯಂತ ಆರೋಗ್ಯಕ್ಕಾಗಿ ಪ್ರಾರ್ಥನೆಗಳು ನಡೆದಿದ್ದವು.
ಇದನ್ನು ಓದಿ : ಕರೂರು ಕಾಲ್ತುಳಿತ ಘಟನೆ – ತನಿಖೆ ಮಾಡ್ತಿರೋ ವ್ಯಕ್ತಿ ಯಾರು ಗೊತ್ತಾ?




