Bangalore Harassment : ಬೆಂಗಳೂರು (Bengaluru) ನಗರದಲ್ಲಿ KSRTC ಬಸ್ನಲ್ಲಿ ಮಹಿಳಾ ವೈದ್ಯೆಗೆ ಕಾಮುಕನಿಂದ ಲೈಂಗಿಕ ಕಿರುಕುಳ. ಪ್ರಯಾಣಿಕರ ಸಹಾಯದಿಂದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಬಂಧಿಸಲಾಗಿದೆ.

Bangalore Harassment : ಬೆಂಗಳೂರಲ್ಲಿ ಕಾಮುಕರ ಹಾವಳಿ KSRTC ಬಸ್ನಲ್ಲಿ ವೈದ್ಯೆಗೆ ಕಿರುಕುಳ
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ, ಕಿರುಕುಳ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರು ಭಯದ ಮಧ್ಯೆ ಬದುಕುತ್ತಿದ್ದಾರೆ. ಇದೀಗ KSRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಯೊಬ್ಬರಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಘಟನೆಯ ವಿವರ
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎ-04-ಎಫ್-1543 ಬಸ್ನಲ್ಲಿ ವೈದ್ಯೆ ಪ್ರಯಾಣಿಸುತ್ತಿದ್ದರು.ಅದೇ ಬಸ್ನಲ್ಲಿ ಇದ್ದ ಫಿರೋಝ್ ಖಾನ್ ಎಂಬಾತ ವೈದ್ಯೆಯ ಪಕ್ಕದಲ್ಲಿ ಬಂದು ಕುಳಿತು ಅಸಭ್ಯ ವರ್ತನೆ ನಡೆಸಿದ.ವೈದ್ಯೆ ಅವನ ವರ್ತನೆಗೆ ವಿರೋಧ ವ್ಯಕ್ತಪಡಿಸಿದರೂ, ಆತ ಮತ್ತೆ ಮತ್ತೆ ಖಾಸಗಿ ಭಾಗಕ್ಕೆ ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದ.ಅಸಹನೆಗೊಂಡ ವೈದ್ಯೆ ತಕ್ಷಣ ತಮ್ಮ ಸಹೋದರ ಮತ್ತು ಬಸ್ ಡ್ರೈವರ್ಗೆ ಮಾಹಿತಿ ನೀಡಿದ್ದಾರೆ.
ವೈದ್ಯೆಯ ಸಹೋದರರು ಪೊಲೀಸರಿಗೆ ಕರೆಮಾಡಿದ ಬಳಿಕ, ಪ್ರಯಾಣಿಕರು ಮತ್ತು ಕಂಡಕ್ಟರ್ ಸೇರಿ ಕಾಮುಕನನ್ನು ಹಿಡಿದು ಸಂಜಯ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
MUST READ : Chikkaballapur Tragedy : ಪ್ರೀತಿಸಿದ ಯುವಕನ ತಾಯಿಗೆ ಬೆಂಕಿ ಹಚ್ಚಿದ ಯುವತಿ ಕುಟುಂಬ
ಮಹಿಳಾ ಸುರಕ್ಷತೆ
ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುರಕ್ಷತೆ ಕುರಿತು ಗಂಭೀರ ಚಿಂತೆ ಹುಟ್ಟಿಸುತ್ತಿವೆ.ನಗರದ ಮಹಿಳೆಯರು ಈಗ ಹಗಲಿನಲ್ಲೂ ಸುರಕ್ಷಿತವಲ್ಲದ ಸ್ಥಿತಿ ಎದುರಿಸುತ್ತಿದ್ದಾರೆ.
MUST WATCH : SIRA BCM HOSTEL INCIDENT |ವಿದ್ಯಾರ್ಥಿ ನಿಗೂಢ ಸಾವು..?




