Kiccha Sudeep : ಸೈಮಾ ಅವಾರ್ಡ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ನಟರು ಹಾಗೂ ಕನ್ನಡ ಚಿತ್ರರಂಗದಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಇದೀಗ ಸೈಮಾಗೆ ನಟ ಕಿಚ್ಚ ಸುದೀಪ್ ಅವರು ತಣ್ಣಗೆ ಹಾಸ್ಯಮಯವಾಗಿಯೇ ಬಿಸಿ ಮುಟ್ಟಿಸಿದ್ದಾರೆ.

KICCHA SUDEEP : ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ಕುರಿತು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. SIIMAನಲ್ಲಿ ಕನ್ನಡ ನಟ–ನಟಿಯರಿಗೆ ತಕ್ಕ ಮಟ್ಟದಲ್ಲಿ ಗೌರವ ನೀಡಲಾಗುತ್ತಿಲ್ಲ ಎಂಬ ಆರೋಪಗಳು ದಿನದಿಂದ ದಿನಕ್ಕೆ ಗಂಭೀರ ರೂಪ ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಟ ವಿಜಯ್ SIIMA ವೇದಿಕೆಯಲ್ಲಿಯೇ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.
ಇದೀಗ SIIMA ಮತ್ತೆ ವಿವಾದಕ್ಕೆ ಸಿಲುಕಿದೆ. ತಮ್ಮ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ನಟ ಕಿಚ್ಚ ಸುದೀಪ್ ಮತ್ತು ನಟ ಉಪೇಂದ್ರ ಅವರನ್ನು ಸಂಬಂದಿಸಿ, ‘ಸಿಂಬು ಅವರ ಬಹುನಿರೀಕ್ಷಿತ ‘ಅರಸನ್’ ಸಿನಿಮಾದ ವಿಲನ್ ಪಾತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ’ ಎಂಬ ಸಂದೇಶವನ್ನು ಹಂಚಿಕೊಂಡಿತ್ತು. ಈ ಟ್ವೀಟ್ ಗಮನಿಸಿದ ಸುದೀಪ್, ತಕ್ಷಣವೇ ಅದಕ್ಕೆ ಹಾಸ್ಯಮಯವಾಗಿ ತಮ್ಮ ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : KANTARA CHAPTER 1: ತೆರೆಯ ಹಿಂದೆ ‘ಕಾಂತಾರ ಚಾಪ್ಟರ್-1’ ಹೋರಾಟ – ರಿಷಬ್ ಶೆಟ್ಟಿಯಿಂದ ಭಾವನಾತ್ಮಕ ಟ್ವೀಟ್..!
“ರಿ ಸೈಮಾ… ನಿಮ್ಮ ಪ್ರಶಸ್ತಿ ಸಂಜೆಗಳಲ್ಲಿ ನೀವು ಏನು ಮಾಡುತ್ತೀರಿ ಎನ್ನುವ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಒಂದು ಸಣ್ಣ ಸಲಹೆ ಇದೆ… ಗುಟ್ಟಾಗಿ ಹೇಳುತ್ತೇನೆ — ನಿಮ್ಮ ಸುದ್ದಿ ಮೂಲಗಳನ್ನು ಬದಲಾಯಿಸಿಕೊಳ್ಳಿ. ಮುಂದಿನ ಸೈಮಾ ಅವಾರ್ಡ್ನಲ್ಲಿ ‘ಅತ್ಯುತ್ತಮ ನಕಲಿ ಸುದ್ದಿ ಪ್ರಶಸ್ತಿ’ ಎನ್ನುವುದು ಇದೆಯೇ ಎಂದು ತಿಳಿದುಕೊಳ್ಳುವ ಕುತೂಹಲ ನನಗಿದೆ.” ಎಂದು ರೀಟ್ವೀಟ್ ಮಾಡಿದ್ದಾರೆ. ಈ ಟೀಕೆಯ ಕೆಲವೇ ಕ್ಷಣಗಳಲ್ಲಿ SIIMA ತಮ್ಮ POST ಅನ್ನು ಡಿಲೀಟ್ ಮಾಡಿದ ಘಟನೆ ಕೂಡ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
MUST WATCH : DAM IN DANGER | BORANAKANIVE ಜಲಾಶಯದಲ್ಲಿ ನೀರು ಸೋರಿಕೆ! ಜನರಲ್ಲಿ ಆತಂಕ, ಅಧಿಕಾರಿಗಳ ನಿದ್ರೆ!




