THEFT : ಬೆಂಗಳೂರು- ಶಿರಾ ಹೈವೆಯಲ್ಲಿ ಹೋಟೆಲ್ ಒಂದರಲ್ಲಿ ಭಯನಾಕ ರಾಬರಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಹೈವೇಯಲ್ಲಿ ಪ್ರಯಾಣ ಮಾಡುವ ಮುನ್ನ ಎಷ್ಟು ಹುಷಾರ್ ಆಗಿದ್ರು ಕಮ್ಮಿನೇ ಕಂಡ್ರಿ. ಕಾರಿನಲ್ಲಿ ಪ್ರಯಾಣ ಮಾಡೋರನ್ನೇ ಟಾರ್ಗೆಟ್ ಮಾಡಿ ಕೆಲ ಐನಾತಿ ಡಕಾಯಿತರು ಹೊಂಚು ಹಾಕಿ ಕಾಯ್ತಾ ಇರ್ತಾರೆ. ಇದೀಗ ಬೆಂಗಳೂರು- ಶಿರಾ ಹೈವೆಯಲ್ಲಿ ಹೋಟೆಲ್ ಒಂದರಲ್ಲಿ ಭಯಾನಕ ರಾಬರಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಬೆಂಗಳೂರು ನಿವಾಸಿಯಾಗಿರೋ ವಿಧ್ಯಾಧರ ದೀಕ್ಷಿತ್ ಎಂಬುವವರು ಕಳೆದ ತಿಂಗಳು 30ರಂದು ಬೆಂಗಳೂರಿನಿಂದ ತಮ್ಮ ಹುಟ್ಟೂರಾದ ಧಾರವಾಡಕ್ಕೆ ಟಯೋಟ ಟೈಸರ್ ಕಾರಿನಲ್ಲಿ ತೆರಳುತ್ತಿದ್ರು. ರಾತ್ರಿ 10:30 ಆಗಿದ್ದರಿಂದ ಊಟ ಮಾಡಲು ಶಿರಾ ಬಳಿಯ ಪಾಕಶಾಲಾ ಹೋಟೆಲ್ಗೆ ಆಗಮಿಸಿದ್ದು, ಸೆಕ್ತೂರಿಟಿ ಹೇಳಿದ ಜಾಗದಲ್ಲೇ ವಿದ್ಯಾಧರ್ ದೀಕ್ಷಿತ್ ಪಾರ್ಕ್ ಮಾಡಿ, ಹೊಟೇಲ್ನ ಒಳಗೆ ಹೋಗಿದ್ದಾರೆ. ಆದ್ರೆ ಊಟ ಮಾಡಿಕೊಂಡು ಹೊರ ಬರುವಷ್ಟರಲ್ಲಿ ಕಿಡಿಗೇಡಿಗಳು ಕಾರಿನ ಮುಂಭಾಗದ ಗಾಜನ್ನು ಹೊಡೆದು ವ್ಯಾನಿಟಿ ಬ್ಯಾಗ್ನಲ್ಲಿದ್ದ ದುಡ್ಡು, ಮೊಬೈಲ್ ಹಾಗೂ ಮಾಂಗಲ್ಯ ಸರವನ್ನು ಕದ್ದೊಯ್ದಿದ್ದಾರೆ.
ಇದನ್ನು ಓದಿ : ಗರ್ಲ್ಫ್ರೆಂಡ್ ಜೊತೆ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಸದ್ಯ ಈ ಸಂಬಂಧ ಶಿರಾ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರಿಗಾಗಿ ಪೊಲೀಸರು ಹುಡುಗಾಟ ನಡೆಸುತ್ತಿದ್ದಾರೆ. ಇನ್ನು ಹೋಟೆಲ್ನಲ್ಲಿ ಸೆಕ್ಯೂರಿಟಿ ಇದ್ರು ಕೂಡ ಪಾರ್ಕಿಂಗ್ನಲ್ಲಿ ದುಷ್ಕರ್ಮಿಗಳು ಕಾರಿನ ಗಾಜು ಹೊಡೆದು ಕಳ್ಳತನ ನಡೆದಿದ್ದು, ಹೋಟೆಲ್ ಸಿಬ್ಬಂದಿಯ ಬೇಜಾವಾಬ್ದಾರಿ ಎದ್ದು ಕಾಣುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.





