Hassan Murder : ಹಾಸನದಲ್ಲಿ ಭೀಕರ ಕೊಲೆಯಾಗಿದ್ದು, ಲವ್ ಬ್ರೇಕಪ್ ಸಂಬಂಧ ಪ್ರೇಮಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

ಪ್ರೀತಿ-ಪ್ರೇಮ ಸಂಬಂಧದ ವಿಚಾರಕ್ಕೆ ರಾಜ್ಯದಲ್ಲಿ ಮತ್ತೊಂದು ಬರ್ಬರ ಹತ್ಯೆ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಎಸ್. ಅಂಕನಹಳ್ಳಿ ಬಳಿ 24 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದ ಯುವಕ ಸುದೀಪ್
ಹತ್ಯೆಗೀಡಾದ ಯುವಕನನ್ನು ಹೊಳೆನರಸೀಪುರದ ನಿವಾಸಿ ಸುದೀಪ್ (24) ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆಯ ಯುವತಿಯನ್ನು ಕಳೆದ ಮೂರು ವರ್ಷಗಳಿಂದ ಸುದೀಪ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಬ್ರೇಕಪ್ ಆಗಿದ್ದು, ಈ ಹಿನ್ನೆಲೆಯಲ್ಲೇ ಈ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮಚ್ಚಿನಿಂದ ಕೊಚ್ಚಿ, ಅಪಘಾತದ ನಾಟಕ
ಸುದೀಪ್ನನ್ನು ಮಚ್ಚಿನಿಂದ ಕೊಚ್ಚಿ, ನಂತರ ಆತನ ದೇಹವನ್ನು ಬೈಕ್ ಮೇಲೆ ಇರಿಸಿ, ಅಪಘಾತವಾಗಿ ತೋರಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆದರೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ ಕಾರಣದಿಂದಲೇ ವಿಷಯ ಬೆಳಕಿಗೆ ಬಂದಿದೆ.
ಇದನ್ನು ಓದಿ : ಪತ್ನಿಯನ್ನು ಇರಿದು ಕೊಂದ ಪತಿ

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ
ನಿನ್ನೆ ರಾತ್ರಿ ಮನೆಯಿಂದ ಬೈಕ್ನಲ್ಲಿ ಹೊರಟ್ಟಿದ್ದ ಸುದೀಪ್, ಮರುದಿನ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರೀತಿ ಪ್ರೇಮ ಹತ್ಯೆಗೆ ಕಾರಣವಾಗುತ್ತಿದೆಯಾ?
ಪ್ರೀತಿ ಸಂಬಂಧಿತ ಸಮಸ್ಯೆಗಳು, ನಿರಾಕರಣೆ, ಅಥವಾ ಕುಟುಂಬದ ಒತ್ತಡಗಳು ಇಂತಹ ದುರಂತಗಳಿಗೆ ಕಾರಣವಾಗುತ್ತಿರುವುದು ತೀವ್ರ ಆತಂಕದ ವಿಚಾರವಾಗಿದೆ.

ಇದನ್ನು ನೋಡಿ : ಹಾಸನದಲ್ಲಿ ಯುವಕನ ಬರ್ಬರ ಹತ್ಯೆ




