Tumakuru : ತುಮಕೂರು ನಗರ ದಿನೇ ದಿನೇ ಅಭಿವೃದ್ಧಿ ಕಾಣ್ತಾ ಇದೆ. ಅದ್ಯಾಕೋ ಇದ್ರ ಜೊತೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ.

ತುಮಕೂರು ನಗರ ದಿನೇ ದಿನೇ ಅಭಿವೃದ್ಧಿ ಕಾಣ್ತಾ ಇದೆ. ಅದ್ಯಾಕೋ ಇದ್ರ ಜೊತೆ ಸಮಸ್ಯೆಗಳು ಕೂಡ ಹೆಚ್ಚಾ ಗುತ್ತಿವೆ. ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಸಮಸ್ಯೆಗಳು ಕಡಿಮೆಯಾಗ್ತಾ ಇಲ್ಲ. ನಗರದ ಸಮಸ್ಯೆಗಳ ಕುರಿತಾಗಿ ನಿಮ್ಮ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಬಿತ್ತರಿಸಿ ಅಧಿಕಾರಿಗಳನ್ನು ಹೆಚ್ಚರಿಸುವ ಕೆಲಸ ಮಾಡುತ್ತಿದೆ.ಆದ್ರೆ ಅದ್ಯಾಕೋ ಅಧಿಕಾರಿಗಳ ಆಲಸ್ಯದಿಂದಾಗಿ ಇಂದಿಗೂ ಜನರ ಹಲವಾರು ಸಮಸ್ಯೆಗಳು ಬಗೆಹರಿಯದೆ, ಜನರು ಪರದಾಡು ತ್ತಿದ್ದಾರೆ. ಇತ್ತ ಹೆಗ್ಗೆರೆ ಗ್ರಾಮಪಂಚಾಯಿತಿಯು ಹೆಡ್ ಕ್ವಾಟ್ರಸ್ ಆಗಿದೆ. ಆದ್ರೆ ಅಲ್ಲಿ ರಸ್ತೆ ಸರಿ ಇಲ್ಲದೆ, ಚರಂಡಿ ಗಳಿಲ್ಲದೆ ಜನರು ಕಷ್ಟ ಅನುಭವಿಸುವಂತಾಗಿದೆ.
ಪಂಚಾಯಿತಿ ಹೆಡ್ ಕ್ವಾಟ್ರಸ್ ಆಗಿದ್ರು ಚರಂಡಿ,ರಸ್ತೆ ಇಲ್ಲ
ಗ್ರಾಮವು ಪಂಚಾಯತಿ ಹೆಡ್ ಕ್ವಾಟರ್ಸ್ ಆಗಿದ್ದರು ಕೂಡ ಈ ಗ್ರಾಮದಲ್ಲಿ ರಸ್ತೆ ಸರಿಯಾಗಿಲ್ಲ , ಚರಂಡಿ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಇದೆಲ್ಲವನ್ನು ಅಧಿಕಾರಿಗಳಿಗೆ ಹೇಳಿದರೂ ಕೂಡ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ . ನಮಗೆ ಸಿಸಿ ರಸ್ತೆ ಮಾಡಿ ಕೊಡಿ, ಸರಿಯಾದ ಚರಂಡಿ ವ್ಯವಸ್ಥೆ ಮಾಡಿಕೊಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Tumakuru : ಮೂಲಭೂತ ಸೌಕರ್ಯವಿಲ್ಲದೆ ಸಾರ್ವಜನಿಕರ ಪರದಾಟ
ಅಧಿಕಾರಿಗಳು ಹಾಗೂ ರಾಜಕಾರಣಿಗಳು ಅವರ ಕೆಲಸ ಆಗ್ಬೇಕು ಅಂದ್ರೆ ಬಂದು ಕೈ ಮುಗ್ದು ವೋಟ್ ಕೇಳ್ತಾರೆ ಆದ್ರೆ ನಮಗೆ ಯಾವುದೇ ಸವಲತ್ತು ಮಾಡಿ ಕೊಡ್ತಿಲ್ಲ , ಏನಾದ್ರೂ ಸಮಸ್ಯೆಯನ್ನು ಹೇಳಿಕೊಂಡ್ರೆ ಎಲ್ಲವನ್ನೂ ಸರಿ ಮಾಡ್ತೀವಿ ಸರಿ ಮಾಡ್ತೀವಿ ಅಂತ ಸುಳ್ಳು ಆಶ್ವಾಸನೆ ಕೊಟ್ಟು ಹೋಗ್ತಾರೆ ಬಿಟ್ರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ನಮ್ಮ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಇದ್ದು, ನಮ್ಮ ಗ್ರಾಮವೇ ಗ್ರಾಮ ಪಂಚಾಯಿತಿ ಹಿಡಿಕೋಟರ್ ಆಗಿದ್ರು ಕೂಡ ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದಿದೆ ಆದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನು ಓದಿ : ವ್ಯಕ್ತಿಯ ಹತ್ಯೆ – ಆರೋಪಿಗಳು ಪರಾರಿ




