Hassan : ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ, ಹೆಣದ ಮೇಲೆ ಹಾಗೂ ಪಕ್ಕದಲ್ಲಿದ್ದ ಬೈಕ್ ಮೇಲೆ ಸೊಪ್ಪು ಮುಚ್ಚಿ ಆರೋಪಿಗಳು ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆ ಆಲಗೌಡನಹಳ್ಳಿ ಗ್ರಾಮದ ಸಮೀಪದ ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎಸ್.ಅಂಕನಹಳ್ಳಿ ಅರಣ್ಯ ಪ್ರದೇಶದ ಬಳಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಿ, ಮೃತದೇಹದ ಮೇಲೆ ಹಾಗೂ ಪಕ್ಕದಲ್ಲಿದ್ದ ಬೈಕ್ನ ಮೇಲೆ ಸೊಪ್ಪು ಮುಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ.
ಮೃತ ವ್ಯಕ್ತಿ ಮಣಿ ಎಂದು ಗುರುತು
ಹತ್ಯೆಗೀಡಾದ ವ್ಯಕ್ತಿಯನ್ನು ಹೊಳೆನರಸೀಪುರದ ಅಂಬೇಡ್ಕರ್ ನಗರ ನಿವಾಸಿ ಮಣಿ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಇದನ್ನು ಓದಿ : ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಸ್ವಾಗತ
ಮರದಡಿ ಸೊಪ್ಪಿನಡಿ ಹೆಣ
ಇಂದು ಬೆಳಗ್ಗೆ ಸ್ಥಳೀಯರು ಹೆಣವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಮೇಲೆ ಹಾಗೂ ಪಕ್ಕದ ಬೈಕ್ ಮೇಲೆ ಸೊಪ್ಪು ಇಡಲಾಗಿದ್ದು, ಇದರಿಂದ ಅಪರಾಧದ ಗುರುತನ್ನು ಮರೆಮಾಚುವ ಉದ್ದೇಶ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಪೊಲೀಸರು ಸ್ಥಳಕ್ಕೆ ಧಾವನೆ
ಇನ್ನು ಘಟನಾ ಸ್ಥಳಕ್ಕೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಧಾವಿಸಿ ಪರಿಶೀಲನೆ ನಡೆಸಿದ್ದು, ಫಾರೆನ್ಸಿಕ್ ತಂಡವು ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಆರಂಭಿಸಿದೆ. ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
ಇದನ್ನು ನೋಡಿ : ಹೆಸರಿಗೆ ಮಾತ್ರ ಗಾರ್ಡನ್ ರಸ್ತೆ – ಆದ್ರೆ ರಸ್ತೆ ತುಂಬಾ ಗುಂಡಿಗಳದ್ದೇ ಕಾರುಬಾರು




