CHITRADURGA : ಯುವಕನೋರ್ವ ಕುಡಿದ ಮತ್ತಿನಲ್ಲಿ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಹೊಸಹಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯುವಕನೋರ್ವ ಕುಡಿದ ಮತ್ತಿನಲ್ಲಿ ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಹೊಸಹಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಅದೇ ಗ್ರಾಮದ 33 ವರ್ಷದ ಯಲ್ಲಪ್ಪ ಎನ್ನಲಾಗಿದೆ.
ಕಾಲು ಜಾರಿ ಬಿದ್ದು ಯುವಕ ಮೃತ್ಯು
ಮೃತ ಯುವಕ ಯಲ್ಲಪ್ಪ ಸಂಬಂಧಿಕರೊಂದಿಗೆ ಎಣ್ಣೆ ಏಟಿಯಲ್ಲಿ ಹೊಸಕಲ್ಲಹಳ್ಳಿ ಗ್ರಾಮದಲ್ಲಿರುವ ಕೆರೆಗೆ ಮೀನು ಹಿಡಿಯಲು ಸಂಬಂಧಿಕರೊಂದಿಗೆ ತೆರಳಿದ್ದ, ಈ ವೇಳೆ ಕಾಲು ಜಾರಿ ಯಲ್ಲಪ್ಪ ನೀರಿನಲ್ಲಿ ಬಿದ್ದಿದ್ದಾನೆ. ನೋಡು ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೂರು ದಿನಗಳಿಂದ ಯಲ್ಲಪ್ಪನನ್ನು ಹುಡುಕಿದ್ದಾರೆ. ಆದ್ರೆ ಎಲ್ಲಿಯೂ ಸಿಕ್ಕಿರಲಿಲ್ಲ. ಇತ್ತ ಮೂರು ದಿನ ಬಳಿಕ ಕೆರೆಯಲ್ಲಿ ಶವ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನು ವಿಷಯ ತಿಳಿದು ಕೆರೆಯ ಬಳಿ ಬಂದ ಪೋಷಕರ, ಸಂಬಂಧಿಕರ ಆಕ್ರಂಧನ ಮುಗಿಲುಮುಟ್ಟಿತ್ತು.
ಇದನ್ನು ಓದಿ : ಪ್ರೀತಿಸಿ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ

ಯಲ್ಲಪ್ಪನನ್ನು ಮೀನುಗಾರಿಕೆಗೆ ಎಳೆದೊಯ್ದ ಈರಣ್ಣ
ಇನ್ನು ಮೃತ ಯಲ್ಲಪ್ಪನ ಅತ್ತೆ ಲಕ್ಷ್ಮಮ್ಮ ಮಾತನಾಡಿ, ಬೆಳಗ್ಗೆಯಿಂದ ಯಲ್ಲಪ್ಪ ಈರಣ್ಣ ಇಬ್ಬರು ಜೊತೆಗೆ ಇದ್ರು ಸರ್. ಈರಣ್ಣ ಯಲ್ಲಪ್ಪನಿಗೆ ಮೀನು ಹಿಡಿಯೋಕೆ ಹೋಗೋಣ ಬಾ ಎಂದಿದ್ದಾನೆ. ಇದಕ್ಕೆ ಯಲ್ಲಪ್ಪ ಒಪ್ಪಲಿಲ್ಲ. ಆದ್ರೂ ಬಿಡದೆ ಈರಣ್ಣ ಯಲ್ಲಪ್ಪನನ್ನು ಕರೆದುಕೊಂಡು ಹೋಗಿದ್ದಾನೆ. ಇಲ್ಲೇ ಕೂತು ಇಬ್ಬರು ಕುಡಿದಿರು ವುದರನ್ನು ಜನರು ನೋಡಿದ್ದಾರೆ. ಆದ್ರೆ ಆಮೇಲೆ ಏನಾಗಿದೆ ಅನ್ನೋದು ಗೊತ್ತಿಲ್ಲ ಎಂದರು.
ಸ್ಥಳಕ್ಕೆ ಗ್ರಾಮಾಂತರ ಠಾಣೆ PSI ಸುರೇಶ್ ಭೇಟಿ
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಾಂತರ ಠಾಣಾ PSI ಸುರೇಶ್ ಭೇಟಿ, ಪರಿಶೀಲನೆ ನಡೆಸಿದ್ರು. ಮರಣೋತ್ತರ ಪರೀಕ್ಷೆಗೆ ಶವ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.
ಇದನ್ನು ನೋಡಿ : ಸಂಪುಟ ಬದಲಾವಣೆ : ತುಮಕೂರು ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಪಟ್ಟ..!?




