Chikkodi : ಪ್ರೀತಿ-ಪ್ರೇಮ ಅಂತ ಅಪ್ಪ-ಅಮ್ಮನನ್ನು ಲೆಕ್ಕಿಸದೆ ಮಕ್ಕಳು ಓಡಿ ಹೋಗುವ ಘಟನೆ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ ಹಿನ್ನೆಲೆಯಲ್ಲಿ, ಮನನೊಂದ ತಂದೆ ಆಕೆಗೆ ಶ್ರಾದ್ಧ ಮಾಡಿ, ಸಂಬಂಧವನ್ನು ಸಂಪೂರ್ಣವಾಗಿ ಮುರಿದಿದ್ದಾರೆ.
ಬಂಧು-ಬಳಗದವರಿಗೆ ಊಟ ಹಾಕಿಸಿದ ತಂದೆ
ಶಿವಗೌಡ ಪಾಟೀಲ್ ಎಂಬುವವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದರು. ಅವರ ಕೊನೆಯ ಮಗಳು ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಅನುಮತಿಯಿಲ್ಲದೇ ಆತನೊಂದಿಗೆ ಓಡಿಹೋಗಿದ್ದಳು. ಈ ಘಟನೆ ತಂದೆ ಶಿವಗೌಡರ ಮನಸ್ಸಿಗೆ ದೊಡ್ಡ ಆಘಾತವನ್ನುಂಟು ಮಾಡಿತು. ಮೊದಲಿಗೆ ಶಿವಗೌಡ ಅವರು ಮಗಳು ಕಾಣೆಯಾಗಿದ್ದಾಳೆ ಎಂದು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನು ಓದಿ : KILLER BMTC : BMTC ಬಸ್ಗೆ ಮತ್ತೊಂದು ಬಲಿ
ತೀವ್ರ ಮನಸ್ತಾಪದಿಂದ ತಿಥಿ ಕಾರ್ಯ ನೆರವೇರಿಸಿದ ತಂದೆ
ಬಳಿಕ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು, ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭೋಜನ ಹಾಕಿಸಿ, ಆಕೆಯ ತಿಥಿ ಕಾರ್ಯವನ್ನ ಮಾಡಿ ಮುಗಿಸಿದ್ದಾರೆ.

ಪ್ರೀತಿ-ಪ್ರೇಮ ಅಂತ ಅಪ್ಪ-ಅಮ್ಮನನ್ನು ಲೆಕ್ಕಿಸದೆ ಮಕ್ಕಳು ಓಡಿ ಹೋಗುವ ಘಟನೆ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತೆ. ಮಕ್ಕಳು ಮಾಡೋ ತಪ್ಪಿಗೆ ಪೋಷಕರು ತಲೆ ತಗ್ಗಿಸುವಂತೆ ಆಗಿದೆ.
ಇದನ್ನು ನೋಡಿ : ಲವರ್ ಜೊತೆ ಓಡಿ ಹೋದ ಮಗಳು; ಬ್ಯಾನರ್ ಹಾಕಿಸಿ ಇಡೀ ಊರನ್ನೇ ಕರೆದು ತಿಥಿ ಊಟ ಹಾಕಿಸಿದ ತಂದೆ!




