KILLER BMTC : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ 9 ವರ್ಷದ ಬಾಲಕಿ ಮೇಲೆ ಹರಿದ ಪರಿಣಾಮ ಆಕೆ ಸ್ಥಳಲ್ಲೇ ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ರಾಜಾಜಿನಗರದ 1ನೇ ಬ್ಲಾಕ್ನಲ್ಲಿ ಭಯಾನಕ ರಸ್ತೆ ಅಪಘಾತ ಸಂಭವಿಸಿದ್ದು, ಬಿಎಂಟಿಸಿ (BMTC) ಬಸ್ಸೊಂದು 9 ವರ್ಷದ ಬಾಲಕಿಯ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಸಾಕಷ್ಟು ಜನರ ಪ್ರಾಣ ಕಸಿದಿದೆ.
ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕಮಲಾನಗರದಲ್ಲಿ ಬಿಎಂಟಿಸಿ ಬಸ್ನ ಬ್ರೇಕ್ ಫೇಲ್ಯೂರ್ ಆಗಿ ನಂದಿನಿ ಪಾರ್ಲರ್ಗೆ ನುಗ್ಗಿದ ಘಟನೆ ನಡೆದಿತ್ತು. ಬಸ್ನಲ್ಲಿ ಇಪ್ಪತ್ತು ಮಂದಿ ಪ್ರಯಾಣಿಕರಿದ್ದರು. ಯಾರಿಗೂ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ನಂದಿನಿ ಪಾರ್ಲರ್ನ ಗೋಡೆ ಮತ್ತು ಒಳಗಡೆಯಿದ್ದ ಕೆಲವು ಉಪಕರಣಗ ಳಿಗೆ ಹಾನಿಯಾಗಿತ್ತು.ಇದೀಗ 9 ವರ್ಷದ ಬಾಲಕಿಯು BMTC ಗೆ ಬಲಿಯಾಗಿದ್ದಾಳೆ.
ಸಾರ್ವಜನಿಕರ ಆಕ್ರೋಶ
ಇದೇ ಸಾಲಿನಲ್ಲಿ ಇಡೀ ನಗರದಾದ್ಯಂತ ಬಿಎಂಟಿಸಿ ಬಸ್ಗಳ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಕಠಿಣ ಟೀಕೆ ಮಾಡುತ್ತಿದ್ದಾರೆ. ಚಾಲಕರ ಅಜಾಗರೂಕತೆ ಮತ್ತು ವಾಹನಗಳ ನಿಯಮಿತ ಪರಿಶೀಲನೆಯ ಕೊರತೆ ಬಗ್ಗೆ ಹಲವರು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ವಿರೋಧವಾಗಿ ಬೃಹತ್ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇದನ್ನು ನೋಡಿ : ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ, 9 ವರ್ಷದ ಬಾಲಕಿ ಮೇಲೆ ಹರಿದ ಬಸ್

ಈ ಹೃದಯವಿದ್ರಾವಕ ಘಟನೆಯಿಂದ ಬಾಲಕಿಯ ಕುಟುಂಬ ಆಘಾತದಲ್ಲಿ ಮುಳುಗಿದ್ದು, ಶವವನ್ನು ಪೋಸ್ಟ್ಮಾರ್ಟಂಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸರ್ಕಾರದಿಂದ ಮತ್ತು ಬಿಎಂಟಿಸಿ ಕಡೆಯಿಂದ ಯಾವುದೇ ಪರಿಹಾರ ಅಥವಾ ಸ್ಪಂದನೆ ಇನ್ನೂ ಬಂದಿಲ್ಲ.
ಇದನ್ನು ಓದಿ : Water Problem : ಹುಳಿಯಾರಿನಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ
ಬಿಎಂಟಿಸಿ ಮತ್ತು ಸರ್ಕಾರದ ಜವಾಬ್ದಾರಿ ಎಲ್ಲಿ?
ಈ ರೀತಿಯ ಘಟನೆಗಳು ಪುನರಾವೃತ್ತಿಯಾಗದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ. ಚಾಲಕರ ತರಬೇತಿ, ವಾಹನಗಳ ತಾಂತ್ರಿಕ ಪರಿಶೀಲನೆ ಹಾಗೂ ಸಾರ್ವಜನಿಕರ ಸುರಕ್ಷತೆ ಎಂಬ ಮೂರು ಮುಖ್ಯ ಅಂಶಗಳಲ್ಲಿ ಬಿಎಂಟಿಸಿ ಗಮನ ಹರಿಸಬೇಕಾಗಿದೆ ಎಂಬ ಬೇಡಿಕೆ ಉಂಟಾಗಿದೆ.




