Water Problem : ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿಯ ಪಕ್ಕದಲ್ಲೇ ನಿವಾಸಿಗಳು ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದಾರೆ.

ಹುಳಿಯಾರು ಪಟ್ಟಣದಲ್ಲಿ 15 ದಿನಗಳಿಂದ ನೀರಿನ ಸಮಸ್ಯೆ
ಚಿಕ್ಕನಾಯಕನಹಳ್ಳಿಯಲ್ಲಿ ಅದ್ಯಾಕೋ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ದಿನೇ ದಿನೇ ಸಮಸ್ಯೆಗಳು ಹೆಚ್ಚಾಗುತಿವೆ ಹೊರತು ಕಡಿಮೆಯಾಗ್ತಿಲ್ಲ. ತಾಲೂಕಿನಲ್ಲಿರುವ ಹಲವಾರು ಗ್ರಾಮ ಪಂಚಾಯಿತಿಯಲ್ಲಿ ಇಂದಿಗೂ ಸಮಸ್ಯೆಗಳು ತಾಂಡವವಾಡುತ್ತಿವೆ. ಇದೇ ಕಾರಣಕ್ಕೆ ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿಯ ಪಕ್ಕದಲ್ಲೇ ನಿವಾಸಿಗಳು ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ಬೀದಿ ನಲ್ಲಿಗಳಿಗೆ ನೀರು ಬಂದಿಲ್ಲ ಎಂದು ನಾಗರಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಕ್ರೋಶ
ಇನ್ನು ಗ್ರಾಮಸ್ಥರು ಮಾತನಾಡಿ, ಪೈಪ್ ಹೊಡೆದು ಹೋಗಿದೆ ಅಂತ ಹೇಳಿದ್ವಿ, ಆದ್ರೆ ಅಧಿಕಾರಿಗಳು ಇವತ್ತು ಸರಿ ಮಾಡ್ತಿವಿ, ನಾಳೆ ಸರಿ ಮಾಡ್ತಿವಿ ಅಂತಿದ್ದಾರೆ. 15 ದಿನ ಆಗಿದೆ ಅಧಿಕಾರಿಗಳನ್ನು ಕೇಳಿದ್ರೆ ಪೈಪ್ ಸರಿ ಮಾಡಿದ್ದೇವೆ ಎನ್ನುತ್ತಾರೆ. ಆದ್ರೆ ಇಂದಿಗೂ ನೀರು ಬರ್ತಾರಿಲ್ಲ ಎನ್ನುತ್ತಿದ್ದಾರೆ ಜನರು.
ಇದನ್ನು ಓದಿ : ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?

ನೀರಿನ ಕೊರತೆಯಿಂದಾಗಿ ಜನರು ಟ್ಯಾಂಕರ್ಗಳ ಮೊರೆ
ನೀರಿನ ತೀವ್ರ ಕೊರತೆಯಿಂದಾಗಿ ಜನರು ಟ್ಯಾಂಕರ್ಗಳ ಮೊರೆ ಹೋಗುತ್ತಿದ್ದಾರೆ. ಮಳೆ ಬಂದರೆ ಸಾಕು ಮನೆಗಳ ಮುಂದೆ ಕೊಳಚೆ ನೀರು ನಿಲ್ಲುತ್ತಿದ್ದು, ಜನರು ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಬೇಕಿದೆ.
ಇದನ್ನು ಓದಿ : ಪೂಜೆಗೆ ಬರ್ತಿದ್ದಳೊಂದಿಗೆ ಪೂಜಾರಿ ಲವ್ವಿಡವ್ವಿ ಗಂಡನ ಚಟಕ್ಕೆ ಚಟ್ಟಕ್ಕೇರಿದ ಅಮಾಯಕ ಹೆಂಡ್ತಿ




