Prathap Simha : ಮೈಸೂರು ದಸರಾ ಸಂಭ್ರಮದ ನಡುವೆ ನಡೆದ ಪೈಶಾಚಿಕ ಘಟನೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ, ಕಲಬುರ್ಗಿ ಜಿಲ್ಲೆಯಿಂದ ಬಲೂನು ವ್ಯಾಪಾರದ ಉದ್ದೇಶದಿಂದ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ಮೈಸೂರಿನ ದೊಡ್ಡಕೆರೆ ಮೈದಾನದ ಬಳಿ ತಂಗಿದ್ದವು. ಈ ಪೈಕಿ ಒಬ್ಬ 9 ವರ್ಷದ ಬಾಲಕಿ ತನ್ನ ತಂದೆ-ತಾಯಿಯ ಜೊತೆ ಬುಧವಾರ ರಾತ್ರಿ ಮಲಗಿದ ಬಳಿಕ ನಾಪತ್ತೆಯಾಗಿದ್ದಳು.
ಶವವಾಗಿ ಪತ್ತೆಯಾದ ಬಾಲಕಿ
ಬೆಳಿಗ್ಗೆ ಹುಡುಕಾಟ ನಡೆಸಿದ ಕುಟುಂಬಕ್ಕೆ ಭಾರೀ ಆಘಾತವಾಯಿತು. ಬಾಲಕಿ 50 ಮೀಟರ್ ದೂರದ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾದಳು. ತನಿಖೆಯ ನಂತರ ಪೈಶಾಚಿಕ ಅತ್ಯಾಚಾರ ಮತ್ತು ಹತ್ಯೆ ನಡೆದಿದೆ ಎಂಬುದು ಖಚಿತವಾಗಿದೆ.
ಇದನ್ನು ನೋಡಿ : ಮೈಸೂರಲ್ಲಿ ರೇಪ್ ಅಂಡ್ ಮರ್ಡರ್: ಯಾವ ಪುರುಷಾರ್ಥಕ್ಕೆ ಸಿಎಂ ನೀವು? ಪ್ರತಾಪ್ ಸಿಂಹ ವಾಗ್ದಾಳಿ
CCTV ಆಧಾರದಿಂದ ಆರೋಪಿಯ ಬಂಧನ
ಪೊಲೀಸರು ಸಿಸಿಟಿವಿ ಫುಟೇಜ್ ಆಧರಿಸಿ ಆರೋಪಿ ಹುಡುಕಾಟ ನಡೆಸಿದ್ರು. ಪತ್ತೆಯಾದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರ ಗುಂಡಿಗೆ ಗುರಿಯಾಗಿದ್ದಾನೆ. ಆತ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಾಮಾಜಿಕ ಆಕ್ರೋಶ – ಪ್ರತಾಪ್ ಸಿಂಹ ಕಿಡಿಕಾರಿ
ನಗರದಲ್ಲಿ ಮಾತನಾಡಿದ ಅವರು, ದಸರಾದಲ್ಲಿ ಗೊಂದಲ ಸೃಷ್ಟಿ ಆಯಿತು, ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ರು. ವಸ್ತುಪ್ರದರ್ಶನದ ಆವರಣದಲ್ಲಿ ವೆಂಕಟೇಶ್ ಕೊಲೆ ಆಗತ್ತೆ. ಅದರೆ ನಾಳೆ ರೇಪ್ ಅಂಡ್ ಮರ್ಡರ್ ಆಗತ್ತೆ. ಇಂತಹ ಊರಿನಲ್ಲಿ ಘಟನೆಗಳನ್ನು ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಪೋಷಕರ ಪಕ್ಕ ಮಲಗಿದ್ದ ಮಗು ಅತ್ಯಾಚಾರ ಕೊಲೆ ಆಗತ್ತೆ ಏನು ಅರ್ಥ. ಯಾವ ಪುರುರಾಷ್ಟಕ್ಕೆ ಸಿಎಂ ನೀವು ಎಂದು ಕಿಡಿಕಾರಿದ್ದಾರೆ.
ಇದನ್ನು ನೋಡಿ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಸಾವು
ಈ ಘಟನೆ ಮೈಸೂರು ಸೇರಿದಂತೆ ರಾಜ್ಯಾದ್ಯಾಂತ ಆಕ್ರೋಶ ಉಂಟುಮಾಡಿದ್ದು, ಜನರು ಕಠಿಣ ಶಿಕ್ಷೆಗಾಗಿ ಆಗ್ರಹಿಸುತ್ತಿದ್ದಾರೆ.




