Dog Attack : ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಕಾಟ ಹೆಚ್ಚಾಗ್ತಾ ಇದೆ. ಬೀದಿಗೆ ಬಂದ್ರೆ ಸಾಕು ಎಲ್ಲಿ ನಾಯಿಗಳು ಎರಗುತ್ತಾವೋ ಎಂದು ಭಯ ಪಡುವಂತಾಗಿದೆ.

ತುಮಕೂರು ಗ್ರಾಮಾಂತರದ ಹಿರೇಹಳ್ಳಿ ಪಂಚಾಯಿತಿಯ ಚಿಕ್ಕಳ್ಳಿ ಗ್ರಾಮದಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮ ನಡೆಯುತ್ತಿರುವ ವೇಳೆ, ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹನುಮ ರಂಗಯ್ಯ ಅವರಿಗೆ ನಾಯಿ ಕಚ್ಚಿದ ಘಟನೆ ನಡೆದಿದೆ.
ಮಿತಿಮೀರಿದ ನಾಯಿ ಹಾವಳಿ
ಕಾರ್ಯಕ್ರಮದ ವೇಳೆ ಅಚಾನಕ್ ನಾಯಿ ಕಚ್ಚಿದ ಪರಿಣಾಮ, ಗಂಭೀರವಾಗಿ ಗಾಯಗೊಂಡ ಹನುಮ ರಂಗಯ್ಯ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಯು ತುಮಕೂರು ಜಿಲ್ಲೆಯ ಕ್ಯಾಸ್ಸಂದ್ರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ನೋಡಿ : ಇಬ್ಬರು ಮಕ್ಕಳ ಜೀವ ತೆಗೆದು ಪ್ರಾಣ ಬಿಟ್ಟ ತಾಯಿ

ಸ್ಥಳೀಯರಲ್ಲಿ ಆತಂಕ, ಅಧಿಕಾರಿಗಳ ಜಾಗೃತಿ ಕರೆ
ಇನ್ನು ಈ ಘಟನೆ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಸಿದೆ. ಹೀಗೆ ಸಾರ್ವಜನಿಕ ಕಾರ್ಯಗಳ ವೇಳೆ ಪ್ರಾಣಿ ದಾಳಿಯಿಂದ ಉಂಟಾಗುವ ಅಪಾಯಗಳ ಕುರಿತು ಪೊಲೀಸರು ಹಾಗೂ ಸಾರ್ವಜನಿ ಕರು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸುರಕ್ಷತೆ ಕ್ರಮಗಳನ್ನು ಪೂರಕವಾಗಿ ಕೈಗೊಳ್ಳುವ ಅಗತ್ಯ ಇನ್ನಷ್ಟು ಸ್ಪಷ್ಟವಾಗುತ್ತಿದೆ. ಜೊತೆಗೆ ಬೀದಿನಾಯಿಗಳ ನಿಯಂತ್ರಣಕ್ಕೂ ತುರ್ತು ಕ್ರಮಗಳ ಅಗತ್ಯವಿದೆ.
ಇದನ್ನು ಓದಿ : ಮಳೆರಾಯನ ಅಬ್ಬರ – ಕೆರೆಯಂತಾದ ನಗರದ ರಸ್ತೆಗಳು





