Bengaluru Suicide : ಕಳೆದ ರಾತ್ರಿ ಭುವನೇಶ್ವರಿ ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಹಾಗೂ ತಾಯಿ ದಾರುಣ ಅಂತ್ಯ ಕಂಡಿದ್ದಾರೆ.

ಬೆಂಗಳೂರು ನಗರದ ಭುವನೇಶ್ವರಿ ನಗರದಲ್ಲಿ ನೆನ್ನೆ ರಾತ್ರಿ ದಾರುಣ ಘಟನೆ ನಡೆದಿದೆ. ತಾಯಿ ವಿಜಯಲಕ್ಷ್ಮಿ (30), ತಮ್ಮ ಇಬ್ಬರು ಮಕ್ಕಳು ಭುವನ್ (1.5 ವರ್ಷ) ಮತ್ತು ವೃಂದಾ (4 ವರ್ಷ) ಜೊತೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಮೂವರ ಮೃತದೇಹ ಪತ್ತೆ
ಪ್ರಾಥಮಿಕ ಮಾಹಿತಿ ಪ್ರಕಾರ, ಮಕ್ಕಳನ್ನು ಕೊಂದ ಬಳಿಕ ತಾಯಿ ಆತ್ಮಹತ್ಯೆಗೆ ಶರಣಾದ ಶಂಕೆ ವ್ಯಕ್ತವಾಗಿದೆ. ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.
ವಿಜಯಲಕ್ಷ್ಮಿ ತಂಗಿಯು ನೀಡಿದ ಮಾಹಿತಿ
ಇನ್ನು ವಿಜಯಲಕ್ಷ್ಮಿ ಅವರ ತಂಗಿಯು ನೀಡಿದ ಮಾಹಿತಿಯ ಪ್ರಕಾರ ಘಟನೆ ನಿನ್ನೆ ಸಂಜೆ ವಿಜಯಲಕ್ಷ್ಮಿಯ ತಂಗಿಯು ಮನೆಗೆ ಬಂದು ನೋಡಿದಾಗ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಇದನ್ನು ನೋಡಿ : ಶಿರಾದಲ್ಲಿ ಮಳೆರಾಯನ ಅಬ್ಬರ – ಕೆರೆಯಂತಾದ ನಗರದ ರಸ್ತೆಗಳು

ಮೃತರು ರಾಯಚೂರು ಮೂಲದವರು
ವಿಜಯಲಕ್ಷ್ಮಿ ಹಾಗೂ ಅವರು ಪತಿ ಮೂಲತಃ ರಾಯಚೂರು ಜಿಲ್ಲೆಗೆ ಸೇರಿದವರು. ಪತಿ ಖಾಸಗಿ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ವೇಳೆ ಅವರು ಮನೆಯಲ್ಲಿರಲಿಲ್ಲ.
ಸಾವಿಗೆ ನಿಖರ ಕಾರಣ ತಿಳಿದಿಲ್ಲ
ಇನ್ನು ಈ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೌಟುಂಬಿಕ ಕಲಹ, ಮನೋವೈಕಲ್ಯ ಅಥವಾ ಆರ್ಥಿಕ ಸಂಕಷ್ಟ ಮುಂತಾದ ಕಾರಣಗಳ ಶಂಕೆ ವ್ಯಕ್ತವಾಗಿದೆ. ಪ್ರಕರಣವನ್ನು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಪತಿಯಿರುವ ಸ್ಥಳ, ಸಂಬಂಧಗಳ ಸ್ಥಿತಿ, ಹಿಂದಿನ ವಿವಾದಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : Vijay Hazare Trophy ಆಡಲು ಮುಂದಾದ ರೋಹಿತ್, ಕೊಹ್ಲಿ





