Virat Kholi And Rohith Sharma : ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ತವರಿನಲ್ಲಿ ಆಡಲಿದೆ.

ಭಾರತ ತಂಡದ ಹಿರಿಯ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುವ ಏಕದಿನ ಸರಣಿಗೆ ಮುನ್ನ ಕನಿಷ್ಠ ಮೂರು ಅಥವಾ ನಾಲ್ಕು ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಆಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಟೆಸ್ಟ್ ಹಾಗೂ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಣೆ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಿಕೆಟಿಗರು ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, 2027ರ ಏಕದಿನ ವಿಶ್ವಕಪ್ ಟಾರ್ಗೆಟ್ ಹೊಂದಿದ್ದಾರೆ. ಈ ಗುರಿ ದೃಷ್ಟಿಯಿಂದ ಫಾರ್ಮ್ ಕಾಪಾಡಿಕೊಳ್ಳಲು ದೇಶೀಯ ಏಕದಿನ ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಸರಣಿ
ಅಕ್ಟೋಬರ್ 19 ರಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ನಿರೀಕ್ಷೆಯಿದೆ. ನವೆಂಬರ್ 30ರಿಂದ ಡಿಸೆಂಬರ್ 6ರವರೆಗೆ ದಕ್ಷಿಣ ಆಫ್ರಿಕಾವನ್ನು ತವರಿನಲ್ಲಿ ಎದುರಿಸುವ ಏಕದಿನ ಸರಣಿಯೂ ಜರುಗಲಿದೆ.
ಇದನ್ನು ಓದಿ : ಅನಿಮಲ್ ಪ್ರಿಂಟೆಡ್ ಸೀರೆಯಲ್ಲಿ Kareena Wild Look

ಡಿಸೆಂಬರ್-ಜನವರಿಯಲ್ಲಿ ವಿಜಯ್ ಹಜಾರೆ ಟೂರ್ನಿ
ವಿಜಯ್ ಹಜಾರೆ ಟ್ರೋಫಿ ಈ ವರ್ಷ ಡಿಸೆಂಬರ್ 24ರಿಂದ ಆರಂಭವಾಗಲಿದ್ದು, ತಂಡಗಳು ಕನಿಷ್ಠ ಆರು ಸುತ್ತಿನ ಪಂದ್ಯಗಳನ್ನು ಆಡಲಿವೆ. ಮುಂಬೈ ಹಾಗೂ ದೆಹಲಿ ಪರ ರೋಹಿತ್ ಹಾಗೂ ಕೊಹ್ಲಿ ತಂಡಕ್ಕೆ ಸೇರುವ ನಿರೀಕ್ಷೆಯಿದೆ.
ನ್ಯೂಜಿಲೆಂಡ್ ಸರಣಿ – ಜನವರಿ 2025
ಜನವರಿ 11ರಿಂದ 18ರ ನಡುವೆ ಭಾರತ, ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇದಕ್ಕಾಗಿ ರೋಹಿತ್ ಮತ್ತು ಕೊಹ್ಲಿ ಫಾರ್ಮ್ ಮತ್ತು ಮೈದಾನದ ಅನುಭವವನ್ನು ವಿಜಯ್ ಹಜಾರೆ ಮೂಲಕ ಪಡೆಯುವ ಗುರಿ ಇಟ್ಟು ಕೊಂಡಿದ್ದಾರೆ.
ಇದನ್ನು ನೋಡಿ : ಅಕ್ರಮ ಸಂಬಂಧ ಆರೋಪಗಳು ಸುಳ್ಳಾ..? ಸೈಯದ್ ಬುರ್ಹಾನ್ ಉದ್ದೀನ್ ಏನಂದ್ರು?





