BBK 12 : ಈ ಹಿಂದೆ ನಡೆದ ಸೀಸನ್ಗಳಂತೆ ಈ ಬಾರಿಯ ಸೀಸನ್ ಅಲ್ಲ ಎಂಬ ವಾಖ್ಯವನ್ನು ಬಿಗ್ ಬಾಸ್ ಸಾಭೀತು ಪಡಿಸುತ್ತಿದೆ. ಅದು ಟಿಆರ್ಪಿ ವಿಚಾರದಲ್ಲೂ ಮುಂದೆವರೆದಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ ಎರಡು ವಾರಗಳು ಕಳೆಯುತ್ತಿವೆ. ಆದರೆ ಈಮಧ್ಯೆ ಶೋ ಅನೇಕ ಅನಿರೀಕ್ಷಿತ ಟ್ವಿಸ್ಟ್ಗಳ ಮೂಲಕ ತೀವ್ರ ಗಮನ ಸೆಳೆಯುತ್ತಿದೆ. ಶೋ ಶುರುವಾದ ಮೊದಲ ದಿನ ಎಲಿಮಿನೇಷನ್, ವೀಕೆಂಡ್ನಲ್ಲಿ ಡಬಲ್ ಎಲಿಮಿನೇಷನ್, ಮೂರನೇ ವಾರದಲ್ಲಿ ಮೊದಲ ಫಿನಾಲೇ ಹೀಗೆ ನೋಡುಗರಿಗೆ ಮಾತ್ರವಲ್ಲದೆ ಮನೆ ಯೊಳಗಿರುವ ಸ್ಪರ್ಧಿಗಳಿಗೂ ಬಿಗ್ ಬಾಸ್ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ.
BBK 12 ಹೊಸ ಶೈಲಿಯಲ್ಲಿ, ಪ್ರೇಕ್ಷಕರಿಗೆ ನವೀನ ಅನುಭವ
ಹಿಂದಿನ ಸೀಸನ್ಗಳ ಶೈಲಿಯಿಂದ ಸಂಪೂರ್ಣ ವಿಭಿನ್ನವಾಗಿರುವ ಈ ಸೀಸನ್, ಸ್ಪರ್ಧಿಗಳಿಗೂ ಹಾಗು ಪ್ರೇಕ್ಷಕರಿಗೂ ಹೊಸ ಅನುಭವ ನೀಡುತ್ತಿದೆ. ಕಥಾ ನಿರೂಪಣೆಯಲ್ಲಿಯೇ ಅಲ್ಲ, ಟಿಆರ್ಪಿ (TRP) ದಾಖಲೆಗಳಲ್ಲಿಯೂ ಬಿಗ್ ಬಾಸ್ ತನ್ನ ಪಾಡಿ ಮಾಡಿದಂತಿದೆ.
ಇದನ್ನು ಓದಿ : ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ಬಾಲಕಿಯ ಮೃತದೇಹ ಪತ್ತೆ

ದಾಖಲೆ TRP: ಪ್ರೀಮಿಯರ್ ಎಪಿಸೋಡ್ಗೆ ಭರ್ಜರಿ ರೆಸ್ಪಾನ್ಸ್
ಈ ವರ್ಷದ 39ನೇ ವಾರದ ಟಿಆರ್ಪಿ ವರದಿ ಹೊರಬಿದ್ದಿದ್ದು, ಅದರಲ್ಲಿ ಬಿಗ್ ಬಾಸ್ ಸೀಸನ್ 12 ಭರ್ಜರಿ ಟಿವಿಆರ್ ದಾಖಲಿಸಿಕೊಂಡಿದೆ.
- ಅರ್ಬನ್ + ರೂರಲ್ ಮಾರುಕಟ್ಟೆ: 11.0 ಟಿವಿಆರ್
- ಅರ್ಬನ್ ಮಾರುಕಟ್ಟೆ ಮಾತ್ರ: 10.8 ಟಿವಿಆರ್
- ಬೆಂಗಳೂರು ನಗರದಲ್ಲಿ: 11.3 ಟಿವಿಆರ್
ಈ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 12, ಇತಿಹಾಸದಲ್ಲೇ ಅತ್ಯುತ್ತಮ ಆರಂಭ ಪಡೆದ ಸೀಸನ್ ಆಗಿದೆ.
ಕರ್ನಾಟಕದ ನಂಬರ್ 1 ರಿಯಾಲಿಟಿ ಶೋ
ಈ ದಾಖಲೆಯ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 12, ಆರಂಭದ ವಾರದಲ್ಲಿಯೇ ಕರ್ನಾಟಕದ ನಂಬರ್ 1 ರಿಯಾಲಿಟಿ ಶೋ ಎಂಬ ಬಿರುದನ್ನು ಸಂಪಾದಿಸಿದೆ. ವಾರದ ಮಧ್ಯದ ದಿನಗಳಲ್ಲಿ ಕೂಡ ಶೋಗೆ 6.6 ಟಿವಿಆರ್ ಲಭಿಸಿದ್ದು, ಶೋ ಮುಂದುವರೆದಂತೆ ಇನ್ನಷ್ಟು ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ.
ಸತೀಶ್ ಮೇಕಪ್ಗೆ ಆಕ್ರೋಶಗೊಂಡ ಚಂದ್ರಪ್ರಭ : ಬಿಗ್ ಬಾಸ್ ಮನೆಯಲ್ಲಿ ಜೋಡಿ ತಂಡದಲ್ಲೇ ಕಿತ್ತಾಟ





