Baanadadevarahatti Temple Issue: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿರುವ ಬಾಣದದೇವರಹಟ್ಟಿ ಪುಣ್ಯಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಕೊರತೆಯಿಂದ ಭಕ್ತಾಧಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ಹರಿಯುತ್ತಿದ್ದು, ಪಂಚಾಯಿತಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ

Baanadadevarahatti Temple Issue : ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದಲ್ಲಿರುವ ಬಾಣದದೇವರಹಟ್ಟಿ ಪುಣ್ಯಕ್ಷೇತ್ರದಲ್ಲಿ ಚರಂಡಿ ಸಮಸ್ಯೆ, ಅಂಗನವಾಡಿ ಕಟ್ಟಡದ ದುಸ್ಥಿತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ಮತ್ತು ಭಕ್ತಾಧಿಗಳು ಕಷ್ಟ ಅನುಭವಿಸುತ್ತಿದ್ದಾರೆ.
ಬಾಣದದೇವರಹಟ್ಟಿ ಪುಣ್ಯಕ್ಷೇತ್ರದ ದುಸ್ಥಿತಿ: ಚರಂಡಿ ಇಲ್ಲದೆ ಭಕ್ತರ ನರಳು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಣದದೇವರಹಟ್ಟಿ ಪ್ರದೇಶವು ಸರ್ಪದೋಷ ನಿವಾರಣೆಗೆ ಪ್ರಸಿದ್ಧವಾದ ಪುಣ್ಯಕ್ಷೇತ್ರ. ಪ್ರತಿ ಸೋಮವಾರ ಮತ್ತು ಶನಿವಾರ ಸಾವಿರಾರು ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ಆದರೆ, ಈ ದೇವರಹಟ್ಟಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಗ್ರಾಮಸ್ಥರಿಗೂ, ಭಕ್ತಾಧಿಗಳಿಗೂ ತೀವ್ರ ತೊಂದರೆ ಉಂಟುಮಾಡುತ್ತಿದೆ.
ಚರಂಡಿ ಸಮಸ್ಯೆಯಿಂದ ಭಕ್ತಾಧಿಗಳಿಗೆ ಕಿರಿಕಿರಿ
ದೇವಾಲಯದ ಮುಂಭಾಗದಲ್ಲೇ ಚರಂಡಿ ವ್ಯವಸ್ಥೆಯ ಕೊರತೆ ಇದೆ.ಕೊಳಚೆ ನೀರು ರಸ್ತೆಯಲ್ಲಿ ಹರಿದು ಬಂದು ಭಕ್ತರ ಸಂಚಾರಕ್ಕೂ ಅಡಚಣೆ ಉಂಟುಮಾಡುತ್ತಿದೆ.ಗ್ರಾಮಸ್ಥರ ಪ್ರಕಾರ, ಪಂಚಾಯಿತಿ ಅಧಿಕಾರಿಗಳು ಈ ಸಮಸ್ಯೆ ಕುರಿತು ಹಲವು ಬಾರಿ ಮನವಿ ಪಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ.“ದೇವರಹಟ್ಟಿ ಹೀಗೆ ಇರುವುದೇ ಶೋಚನೀಯ. ಲಕ್ಷಾಂತರ ಭಕ್ತರು ಬರುವಾಗಲೂ ಪಂಚಾಯಿತಿ ಕಣ್ಣಿರಿಸಿಕೊಂಡು ಕುಳಿತಿದೆ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Baanadadevarahatti ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆ
ಈ ಗ್ರಾಮದ ಅಂಗನವಾಡಿ ಕೇಂದ್ರವೂ ಕೂಡ ಸುರಕ್ಷತೆಯಿಲ್ಲದ ಸ್ಥಿತಿಯಲ್ಲಿದೆ.
ಕಟ್ಟಡ ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಮಕ್ಕಳು ಬಾಡಿಗೆ ಮನೆಯಲ್ಲಿ ಪಾಠ ಪಡೆಯುತ್ತಿದ್ದಾರೆ.
ಗ್ರಾಮಸ್ಥರು ತಕ್ಷಣ ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸರ್ಕಾರದ ಜಮೀನಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಬಯಲಿಗೆಳೆದ ಪ್ರಜಾಶಕ್ತಿ ಟಿವಿ
ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಕಿಡಿ
ಗ್ರಾಮಸ್ಥರು ಪ್ರಜಾಶಕ್ತಿ ಟಿವಿ ಜೊತೆ ಮಾತನಾಡಿ,
“ನಾವು ಅನೇಕ ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಯಾರೂ ಗಮನ ಕೊಡುತ್ತಿಲ್ಲ. ಪುಣ್ಯಕ್ಷೇತ್ರವಿದ್ದರೂ ಮೂಲಭೂತ ಸೌಲಭ್ಯಗಳಿಲ್ಲ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶವು ಗಣಿಭಾದಿತ ವಲಯದಲ್ಲಿಯೂ ಸೇರಿದೆ, ಅಂದರೆ ಬಂಡೆ ಗಣಿಗಾರಿಕೆಯ ಪ್ರಭಾವದಿಂದ ಭೂಮಿಯೂ ಹಾನಿಗೊಳಗಾಗಿದೆ.
ಆದರೆ ಇಂತಹ ಧಾರ್ಮಿಕ ಮತ್ತು ಇತಿಹಾಸಿಕ ಕ್ಷೇತ್ರದ ಸಂರಕ್ಷಣೆ ಸರ್ಕಾರದ ಕರ್ತವ್ಯ ಎಂಬ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ
MUST WATCH :DEADLY ACCIDENT | ಡೆಡ್ಲಿ ಆಕ್ಸಿಡೆಂಟ್ನಲ್ಲಿ ದಂಪತಿ ದಾರುಣ ಸಾ* | KOLAR NEWS




