School Holidays : ಸೆಪ್ಟೆಂಬರ್ 20ರಿಂದ ಅ.8ರವರೆಗೆ ಶಾಲಾ ಮಕ್ಕಳಿಗೆ ನೀಡಿದ್ದ ದಸರಾ ರಜೆ (School holidays) ಅಂತ್ಯಗೊಂಡಿದ್ದು, ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ.

ಸೆಪ್ಟೆಂಬರ್ 20ರಿಂದ ಅ.8ರವರೆಗೆ ಶಾಲಾ ಮಕ್ಕಳಿಗೆ ನೀಡಿದ್ದ ದಸರಾ ರಜೆ (Dasara holidays) ಅಂತ್ಯಗೊಂಡಿದ್ದು, ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ. ಇದೀಗ ಶಿಕ್ಷಕರು ಇನ್ನೂ 9 ದಿನಗಳ ರಜೆ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬೇಡಿಕೆ ಜಾತಿ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (Caste Census) ದೈಹಿಕ ಹಾಗೂ ಮಾನಸಿಕ ಒತ್ತಡದ ನಡುವೆ ಮೂಡಿಬಂದಿದೆ.
ಜಾತಿ ಗಣತಿ ಗೊಂದಲ
ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಾವಿರಾರು ಶಿಕ್ಷಕರು, ಸೆಪ್ಟೆಂಬರ್ 22ರಿಂದ ಜಾತಿ ಗಣತಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯ ದಿನದ ನಂತರದ ಅವಧಿಯಲ್ಲಿಯೂ ನಡೆಯುತ್ತಿದ್ದು, ರಜೆ ದಿನಗಳಲ್ಲಿಯೂ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಇದರಿಂದಾಗಿ ಶಿಕ್ಷಕರು ಸಾಕಷ್ಟು ಒತ್ತಡ ಅನುಭವಿಸುತ್ತಿದ್ದಾರೆ.
School Holidays : ಅ.8ರಿಂದ ಶಾಲೆಗಳ ಪುನರಾರಂಭ
ಇನ್ನು ಸಮೀಕ್ಷೆ ಕಾರ್ಯದ ಅವಶ್ಯಕತೆ ಹಿನ್ನೆಲೆಯಲ್ಲಿ, ಅ.8ರಿಂದ ಅ.12ರವರೆಗೆ ಶಾಲೆಗಳ ಪಾಠ ಸಮಯವನ್ನು ಬೆಳಿಗ್ಗೆ 8.00ರಿಂದ ಮಧ್ಯಾಹ್ನ 1.00ರವರೆಗೆ ಸೀಮಿತಗೊಳಿಸಲಾಗಿದೆ. ನಂತರ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ನಿರತರಾಗಬೇಕಿದೆ. ಬೆಂಗಳೂರಿನಲ್ಲಿ ವಿಶೇಷವಾಗಿ ಅ.24ರವರೆಗೆ ಮಧ್ಯಾಹ್ನದ ನಂತರ ಶಾಲೆಗಳಿಗೆ ರಜೆ ನೀಡಲಾಗಿದೆ.

School Holidays : ದಸರಾ ರಜೆಯನ್ನು ಅ.17ರವರೆಗೆ ವಿಸ್ತರಿಸಬೇಕು
“ಶಿಕ್ಷಕರು ದೈಹಿಕ ಮತ್ತು ಮಾನಸಿಕವಾಗಿ ತುಂಡಾಗುತ್ತಿದ್ದಾರೆ. ಸಮೀಕ್ಷಾ ಹೊಣೆಗಾರಿಕೆಯಿಂ ದಾಗಿ ಅವರ ಮೇಲೆ ಹೆಚ್ಚಿನ ಒತ್ತಡವಿದೆ. ಹೀಗಾಗಿ ಅ.17ರವರೆಗೆ ದಸರಾ ರಜೆ ವಿಸ್ತರಿಸ ಬೇಕೆಂದು ಮನವಿ ಮಾಡಲಾಗಿದೆ,” ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.
ಸರ್ಕಾರದ ಮುಂದಿರುವ ಸವಾಲು
ಇದೀಗ, ಸರ್ಕಾರದ ಮುಂದೆ ಶಿಕ್ಷಣ ಪ್ರಕ್ರಿಯೆಯ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಜೊತೆಗೆ, ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸುವ ಸವಾಲು ಕೂಡ ಉಂಟಾಗಿದೆ. ಇದಲ್ಲದೆ, ರಜೆ ವಿಸ್ತರಣೆ ಕುರಿತು ಸರ್ಕಾರ ಎಂತಹ ನಿರ್ಧಾರ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯೂ ಇದೆ.
ಇದನ್ನು ನೋಡಿ : ಲಕ್ಷ ಲಕ್ಷ ಬಿಪಿಎಲ್ ಕಾರ್ಡ್ಗಳು ಅನರ್ಹ- ಸರ್ಕಾರದ ವಿರುದ್ಧ ಸಿಡಿದೆದ್ದ ಜನರು| TUMAKURU NEWS




