
BENGALURU : ರಾಜ್ಯದ ಎಲ್ಲಾ ಶಾಲೆಗಳಿಗೂ ನಾಳೆಯಿಂದ (ಸೆಪ್ಟೆಂಬರ್ 20) ದಸರಾ ರಜೆ ಘೋಷಿಸ ಲಾಗಿದೆ. ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ದಸರಾ ರಜೆಗಳನ್ನು ಮಕ್ಕಳಿಗೆ ಮೈಸೂರು ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ನೀಡಲಾಗಿದೆ.
ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರವರೆಗೆ, ರಾಜ್ಯದ ಸರ್ಕಾರಿ ಶಾಲೆಗಳಿಗೂ ಒಟ್ಟು 18 ದಿನಗಳ ಹಬ್ಬದ ರಜೆ ಘೋಷಿಸಲಾಗಿದೆ. ಅಕ್ಟೋಬರ್ 2ರಂದು ನಡೆಯುವ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಶಿಕ್ಷಣ ಇಲಾ ಖೆ ಇಂದು ಆದೇಶ ಹೊರಡಿಸಿದೆ.
ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್ 22ರಂದು ತಾಯಿ ಚಾಮುಂಡೇ ಶ್ವರಿ ದೇವಾಲಯದಲ್ಲಿ ಚಾಲನೆ ದೊರೆಯಲಿದೆ. ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ದಸರಾ ಸಂಭ್ರಮ ನಡೆಯಲಿದೆ.




