MARK MOVIE : ಬಿಗ್ ಬಾಸ್ ಸೀಸನ್ 12 ನಿರೂಪಣೆಯಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

MARK MOVIE : ಮಾರ್ಕ್ ಚಿತ್ರದ ಫಸ್ಟ್ ಸಾಂಗ್ ಬಿಡುಗಡೆ
ನಟ ಕಿಚ್ಚ ಸುದೀಪ್ (KICCHA SUDEEP) ಅವರ ಮುಂದಿನ ಬಿಗ್ ಆ್ಯಕ್ಷನ್ ಚಿತ್ರ ‘ಮಾರ್ಕ್‘ನ (MARK) ಮೊದಲ ಹಾಡು ‘ಸೈಕೋ ಸೈತಾನ್‘ (PSYCHO SATAN) ಬಿಡುಗಡೆಯಾಗಿದೆ. ಕ್ಯಾಂಚಿ ಟ್ಯೂನ್ ಮತ್ತು ಎನರ್ಜೆಟಿಕ್ ಲಿರಿಕ್ಸ್ ಇರುವ ಈ ಹಾಡು ಈಗಾಗಲೇ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
MARK MOVIE : ಅಜನೀಶ್ ಬಿ. ಲೋಕನಾಥ್ ಮತ್ತೊಂದು ಹಿಟ್ ತರಲು ಸಿದ್ಧ!
KANTARA CHAPTER 1 ಮೂಲಕ ಹಿಟ್ ಸಿಕ್ಕ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ (ANJANEESH B. LOKANATH) ಈಗ ‘ಮಾರ್ಕ್’ ಚಿತ್ರದ ಮೂಲಕ ಮತ್ತೆ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ. ಕನ್ನಡ ಹಾಗೂ ತಮಿಳುದಲ್ಲಿ ಬಿಡುಗಡೆಯಾದ ‘ಸೈಕೋ ಸೈತಾನ್’ ಹಾಡಿನಲ್ಲಿ ವಿಜಯ್ ಪ್ರಕಾಶ್, ಅಜನೀಶ್ ಮತ್ತು ಅನಿರುದ್ಧ್ ಶಾಸ್ತ್ರಿ ಗಾವು ನೀಡಿದ್ದಾರೆ. ಸಾಹಿತ್ಯವನ್ನು ಅನೂಪ್ ಭಂಡಾರಿ ರಚಿಸಿದ್ದಾರೆ.

ಮಾರ್ಕ್ ಚಿತ್ರದ ಟೀಸರ್ಗೆ ಭರ್ಜರಿ ರೆಸ್ಪಾನ್ಸ್
ʼಕೆ 47ʼ ತಾತ್ಕಾಲಿಕ ಶೀರ್ಷಿಕೆಯಲ್ಲಿ ಆರಂಭವಾದ ಈ ಚಿತ್ರ ಇದೀಗ ‘ಮಾರ್ಕ್‘ ಎಂಬ ಫೈನಲ್ ಶೀರ್ಷಿಕೆಯಲ್ಲಿ ಮುನ್ನಡೆದು ತೇಜಸ್ವಿಯಾಗಿ TEASER ಮೂಲಕ ಜನಮನ ಸೆಳೆದಿದೆ. ಇನ್ನು ಸೆಷ್ಟಂಬರ್ 1ರಂದು ಬಿಡುಗಡೆಯಾದ ಟೀಸರ್ನಲ್ಲಿ ಸುದೀಪ್ ‘ಅಜಯ್ ಮಾರ್ಕಾಂಡೆ’ ಅಲಿಯಾಸ್ ‘ಮಾರ್ಕ್’ ಎಂಬ POWERFULL ಪಾತ್ರದಲ್ಲಿ ಮಿಂಚಿದ್ದಾರೆ.
ಮ್ಯಾಕ್ಸ್ ಡಿಸೆಂಬರ್ 25ಕ್ಕೆ ರಿಲೀಸ್
ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ವಿಜಯ್ ಕಾರ್ತಿಕೇಯ ಅವರೇ ʼಮಾರ್ಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ʼಮಾರ್ಕ್ʼ ಸಿನಿಮಾದ ಫಸ್ಟ್ ಲುಕ್ ಟೀಸರ್ನಲ್ಲಿ ಸುದೀಪ್ ಮತ್ತೊಮ್ಮೆ ಪವರ್ಫುಲ್ ಪಾತ್ರದಲ್ಲಿ ಮಿಂಚಿದ್ದಾರೆ. ಅಜಯ್ ಮಾರ್ಕಾಂಡೆ ಆಲಿಯಾಸ್ ಮಾರ್ಕ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಇದು ಕೂಡ ʼಮ್ಯಾಕ್ಸ್ʼನಂತೆ ಭರ್ಜರಿ ಆ್ಯಕ್ಷನ್ ಚಿತ್ರ ಎನ್ನುವ ಸೂಚನೆ ಟೀಸರ್ನಲ್ಲೇ ಸಿಕ್ಕಿದೆ. ಈ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ಗಳು ಜತೆಯಾಗಿ ನಿರ್ಮಿಸುತ್ತಿದ್ದು, ಅರ್ಜುನ್ ತ್ಯಾಗರಾಜನ್ ಮತ್ತು ಸೆಂಥಿಲ್ ತ್ಯಾಗರಾಜನ್ ಬಂಡವಾಳ ಹೂಡಿದ್ದಾರೆ. ಛಾಯಾಗ್ರಾಹಕರಾಗಿ ಶೇಖರ್ ಚಂದ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

2025 ಅಜನೀಶ್ ವರ್ಷ
ʼಕಾಂತಾರ ಚಾಪ್ಟರ್ 1ʼನಲ್ಲಿ ಭಕ್ತಿಭಾವ ತುಂಬಿದ ‘ಬ್ರಹ್ಮಕಲಶ’ ಹಾಡು, ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಸೂಪರ್ ಹಿಟ್ ಹಾಡು ‘ಇದ್ರೆ ನೆಮ್ದಿಯಾಗಿ ಇರ್ಬೇಕ್‘, ಇವೆಲ್ಲವೂ ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ರೆಂಜ್ ತೋರಿಸುತ್ತಿದೆ. 2025 ವರ್ಷವು ನಿಜಕ್ಕೂ ಅಜನೀಶ್ ಅವರ ವರ್ಷವಾಗುತ್ತಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.
WATCH NEXT : EDUCATION MINISTER ನೋಡಿ! ಸೌಕರ್ಯವಿಲ್ಲದೆ ಸೊರಗುತ್ತಿದೆ ಶಾಲೆ




