Women Suicide In Bangalore :ಪತಿಯ (Husband) ಕಿರುಕುಳದಿಂದ ಬೇಸತ್ತು ಪತ್ನಿ (Wife) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಲಗ್ಗೆರೆಯ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ. ರಕ್ಷಿತಾ(26) ಆತ್ಮಹತ್ಯೆಗೆ ಶರಣಾದ ಗೃಹಿಣಿ.

Women Suicide In Bangalore : ಬೆಂಗಳೂರು (Bengaluru) ನಗರದ ಲಗ್ಗೆರೆಯ (Laggere ) ಮುನೇಶ್ವರ ಬ್ಲಾಕ್ನಲ್ಲಿ ಪತಿಯ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬರು (Housewife) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 26 ವರ್ಷದ ರಕ್ಷಿತಾ ಎಂಬವರು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದಾರೆ.
ರಕ್ಷಿತಾ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಪ್ರಖ್ಯಾತ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿದ್ದ ರವೀಶ್ ಎಂಬವರನ್ನು ಮದುವೆಯಾಗಿದ್ದರು. ಆದರೆ ಹೆಣ್ಣು ಮಗು ಬೇಡ ಗಂಡು ಬೇಕಿತ್ತು ಇದರಿಂದ, ಕಳೆದ ಮೂರು ವರ್ಷಗಳಿಂದ ರವೀಶ್ ಪತ್ನಿ ರಕ್ಷಿತಾಳ ಜೊತೆ ನಿರಂತರ ಗಲಾಟೆ ಮಾಡುತ್ತಿದ್ದು, ಇವರ ಮಧ್ಯೆ ನಡೆದ ಗಲಾಟೆ ತೀವ್ರವಾಗಿದ್ದು ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಲ್ದೇ ರವೀಶ್ನ ಸಹೋದರ ಲೋಕೇಶ್ ಕೂಡಾ ಇದೇ ಮನೆಯಲ್ಲೇ ವಾಸವಾಗಿದ್ದು, ಅವನು ಕೂಡ ರಕ್ಷಿತಾಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದನೆಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಭಾನುವಾರ ರಾತ್ರಿ ಕೂಡ ಗಲಾಟೆಯು ತೀವ್ರವಾಗಿ ನಡೆದು, ಇಂದು ಬೆಳಗ್ಗೆ ಮನನೊಂದ ರಕ್ಷಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಕುಟುಂಬಸ್ಥರು ಗಂಡ ರವೀಶ್ ಹಾಗೂ ಸಹೋದರ ಲೋಕೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರವೀಶ್ ಗೃಹಿಣಿಯನ್ನು ಹತ್ಯೆ ಮಾಡಿದ್ದಾರೆ ಮಹಿಳೆ ಕುಟುಂಬಸ್ಥರು ಆರೋಪಿಸಿದ್ದು, ಅಲ್ದೇ ಮೂರು ವರ್ಷದ ಮಗಳ ಮೇಲೂ ಹಲ್ಲೆ ನಡೆದಿದೆ ಎಂಬ ಆರೋಪವನ್ನು ಸಹ ಮಾಡಿದ್ದಾರೆ. .
ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ರಕ್ಷಿತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.




