
Mom Kills Daughter, Then Commits Suicide : ಶಿವಮೊಗ್ಗ ನಗರದ ಮೆಗ್ಗಾನ್ ನರ್ಸಿಂಗ್ ಕ್ವಾಟ್ರರ್ಸ್ (Megan Nursing Quarters) ನಲ್ಲಿ ತಾಯಿ ತನ್ನ 11 ವರ್ಷದ ಮಗಳನ್ನು ಕೊಂದು, ಬಳಿಕ ತಾನು ಆತ್ಮಹತ್ಯೆಗೆ (Suicide) ಶರಣಾದ ದಾರುಣ ಘಟನೆ ನೆನ್ನೆ ರಾತ್ರಿ ನಡೆದಿದ್ದು,ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಆರನೇ ತರಗತಿ ಓದುತ್ತಿದ್ದ ಪೂರ್ವಿಕಾಳ ತಲೆಗೆ ಮಚ್ಚಿನಿಂದ ಹೊಡೆದು ಸಾಯಿಸಿದ ಆರೋಪಿ ಶೃತಿ ಬಳಿಕ ಮಗಳ ಮೃತದೇಹದ ಮೇಲೆ ನಿಂತುಕೊಂಡ ಫ್ಯಾನ್ಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಶೃತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಗುರುವಾರ ರಾತ್ರಿ ಈ ಕೊಲೆ ಕೃತ್ಯ ಎಸಗಿದ್ದಾಳೆ.
ಶೃತಿ ಮೆಗ್ಗಾನ್ ಸಿಬ್ಬಂದಿಯೊಬ್ಬರ ಪತ್ನಿಯಾಗಿದ್ದು, ಘಟನೆ ಸಂದರ್ಭ ಪತಿಯು Night Shift ಡ್ಯೂಟಿಯಲ್ಲಿದ್ದರು. ಬೆಳಗ್ಗೆ ಡ್ಯೂಟಿ ಮುಗಿಸಿ ಕ್ವಾಟ್ರರ್ಸ್ ಗೆ ಬಂದಾಗ ವಿಷಯ ತಿಳಿದಿದೆ. ಇನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.




